ಕೊಲೆಗಾರ ಯಾರು?
ಕೊಲೆಗಾರ ಯಾರು?
ಇದಕ್ಕೆ ಸುಮಾರು 1950 ರ ದಶಕದಲ್ಲಿ ತಮಿಳು ನಾಡಿನಲ್ಲಿನಡೆದ ಒಂದು ಘಟನೆಯೇ ಆಧಾರ .
ಸ್ವಾಮಿ ನಾಥನ್ ಒಬ್ಬ ಖ್ಯಾತ ಬರಹಗಾರ. ಇವನ ಕಾದಂಬರಿಗಳು ಅಸಂಖ್ಯಾತ ಓದುಗರನ್ನತಲುಪಿ ಹೊಗಳಿಕೆಗೆ ಪಾತ್ರವಾಗಿದ್ದರೂ ಅದರಿಂದ ತನ್ನ ಕಷ್ಟದ ಜೀವನವೇನೂ ಸುಧಾರಣೆಯಾಗಲಿಲ್ಲ.
ಮದುವೆ ವಯಸ್ಸಿನ ಮಗಳು ಮತ್ತು ಮಡದಿ ಇವನ ಒಂದು ಪುಸ್ತಕವನ್ನೂ ಓದಿದವರಲ್ಲ. ಸ್ವಾಮಿ ಎಂದೂ ಹಣಕ್ಕಾಗಿ ಬರೆದವನಲ್ಲ. ಹೀಗಾಗಿ ಸ್ವಾಮಿಗೆ ಒಂದು ಪುಸ್ತಕಕ್ಕೆ ಆ ಕಾಲಕ್ಕೆ ಇಪ್ಪತ್ತು ರೂಪಾಯಿ ಕೊಟ್ಟರೆ ಅದೇ ಹೆಚ್ಚು . ಇದರಿಂದ ಪ್ರಕಾಶಕರು ಹೆಚ್ಚು ಹಣ ಮಾಡಿ ಕೊಳ್ಳುತ್ತಿದ್ದರು . ಒಂದು ದಿನ ಮನೆಯಲ್ಲಿ ಮಗಳ ಮದುವೆ ವಿಷಯದಲ್ಲಿ ಜಗಳ ಆಯ್ತು. ಒಂದು ಒಳ್ಳೆಯ ಸೀರೆ ತಂದು ಕೊಡಲೂ ನಿಮ್ಮಿಂದ ಆಗಲಿಲ್ಲ.ಇನ್ನು ಮಗಳ ಮದುವೆ ಬರೀ ಕನಸು .ನಮಗೆ ಸ್ವಲ್ಪ ವಿಷ ಕೊಟ್ಟು ಬಿಡಿ ಆಮೇ ಲೆ ನೀವು ನೆಮ್ಮದಿ ಯಾಗಿ ಇನ್ನೂ ಹೆಚ್ಚು ಪುಸ್ತಕ ಗಳನ್ನ ಬರೆಯ ಬಹುದು .ಅಂದಾಗಲೇ ಸ್ವಾಮಿಗೆ ಮಗಳಿಗೆ ಮದುವೆ ಮಾಡಬೇಕು ಅನ್ನೋ ವಿಷ ಯ ತಲೆಗೆ ಹೋಗಿದ್ದು. ರಾತ್ರಿ ಹನ್ನೊಂದು ಗಂ ಟೆ .ಅವನು ದಿನವೂ ಬರೆಯಲು ಶುರು ಮಾಡು ವ ಸಮಯ ಇದು .ಅವನ ನೆಚ್ಚಿನ ಪೆನ್ ಹುಡು ಕಾಡಿದ ಎಲ್ಲಿ ನೋಡಿದರೂ ಕಾಣಲಿಲ್ಲ. ಅವನ ಪ್ರೀತಿಯ ಗೆಳೆಯ ಕೊಟ್ಟಿದ್ದ ಪೆನ್ನು. ಬಹಳ ಬೇ ಜಾರಾಯ್ತು. ಬೇರೊಂದು ಪೆನ್ನು ತಂದು ಬರೆ ಯಲು ಕೂತರೂ ಏಕೋ ಏನು ಬರೆಯಲೂ ಸಾ ಧ್ಯವಾಗ್ತಿಲ್ಲ. ನಿದ್ದೆ ಬರಲಿಲ್ಲ. ಇಡೀ ರಾತ್ರಿ ಮಗಳ ಮದುವೆ ಬಗ್ಗೆ ಯೋಚನೆ ಮಾಡಿದ. ಹಣವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲವೆಂದು ಪರಿತಪಿ ಸಿದ. ಬೆಳಗ್ಗೆ ಎದ್ದು ಹೊರಗೆ ಬಂದು ಮನೆ ಬಾಗಿ ಲಲ್ಲಿ ನಿಂತಾಗ ಮೋರಿಯಲ್ಲಿ ಏನೋ ಹೊಳೆಯು ವವಸ್ತು ಕಂಡು ಹತ್ತಿರ ಹೋಗಿ ನೋಡಿದ. ಮೋರಿಯಲ್ಲಿ ಬೆಳೆದ ಗಿಡದ ಮಧ್ಯೆ ಸಿಕ್ಕಿಹಾಕಿ ಕೊಂಡಿತ್ತು ಅದು ಅವನ ನೆಚ್ಚಿನ ಪೆನ್ನಿನ ಕ್ಯಾಪ್ ಹಾಗೆ ಪೆನ್ ಸಹಾ ಇರಬಹುದೆಂದು ಹುಡುಕಾಡಿ ದ ಎಲ್ಲೂ ಕಾಣಲಿಲ್ಲ.ಬಹಳ ನೊಂದು ಒಳಗೆ ಬಂದು ಮಗಳನ್ನ ಕೇಳಿದ ಪೆನ್ ಮೇಲೆ ಏಕೆ ನಿಮಗೆ ಕೋಪ. ಅದಕ್ಕೆ ಅವಳು ಅಮ್ಮ ಹೊರಗೆ ಎಸೆದದ್ದು ನಾನಲ್ಲ ಅಂತ ಹೇಳಿ ಹೊರಟು ಹೋ ದಳು.
ಪ್ರತಿದಿನ ಕೆಲವು ಸ್ನೇಹಿತರನ್ನ ಭೇಟಿ ಆಗುವ ಹಾಗೆ ಮನೆಯಿಂದ ಹೊರಟ. ಮೂರುನಾಲ್ಕು ಜನ ಒಬ್ಬಸ್ನೇಹಿತನ ಮನೆಯಲ್ಲಿ ದಿನವೆಲ್ಲಾ ಇಸ್ಪೇಟ್ ಆಡುವುದು ಇವರ ಹವ್ಯಾಸ.ಅಲ್ಲಿಗೆ ಬಂದ. ಅಂದು ಯಾರೂ ಇರಲಿಲ್ಲ .ಬಾಗಿಲು ಹಾಕಿತ್ತು. ಕಿಟಕಿ ಇಂದಲೇ ಒಂದು ಹೆಣ್ಣು ಧ್ವನಿ ಹೇಳ್ತು ನಿಮ್ಮ ಮನೆ ಹಾಳಾಗಿ ಹೋಗೋದಷ್ಟೇ ಅಲ್ಲದೇ ಇನ್ನೊಬ್ಬರ ಮನೆಯನ್ನೂ ಹಾಳುಮಾ ಡ್ತಿರಲ್ಲ ನಿಮಗೆ ಏನೂ ಅನಿಸೋದೇ ಇಲ್ವೇ. ಬಂಡ ಜೀವಗಳು ಅಂತ ಕಿಟಕಿ ಬಾಗಿಲು ಹಾಕ್ಕೊಂ ಡಾಗ ಬಹಳ ಅವಮಾನವಾಯ್ತು .ಅಲ್ಲಿಂದ ಒಬ್ಬ ಪ್ರಕಾಶಕರ ಮನೆಗೆ ಬಂದ. ಅಲ್ಲಿ ಹೊಸಬ ರು ಒಬ್ಬರು ಆರ್ಮುಗಮ್ ಚೆಟ್ಟಿಯಾರ್ ಅಂತ ಬಂದಿದ್ದರು. ಅವರು ಆ ಕಾಲಕ್ಕೆ ದೊಡ್ಡ ಸಾಹು ಕಾರ.ಇವರು ಒಳ್ಳೆಯ ಬರಹಗಾರ ಇದುವರೆಗೂ ಸುಮಾರು ಮುನ್ನೂರುಪತ್ತೇದಾರಿ ಕಾದಂಬರಿಗ ಳು ಬರೆದಿದ್ದಾರೆ. ಇವರ ಪುಸ್ತಕಗಳಿಗೆ ಬಹಳ ಬೇಡಿಕೆ ಇದೆ . ಏಕೋ ಈಗೀಗ ಹೆಚ್ಚು ಬರೆಯು ತ್ತಿಲ್ಲ ಅಂತ ಆರ್ಮುಗಮ್ ಗೆ ಸ್ವಾಮಿಯನ್ನ ಪರಿ ಚಯಿಸಿದ .ಆಗ ನನಗೆ ಮೂರು ತಿಂಗಳಲ್ಲಿ ನೂರು ಜನರ (ವ್ಯಕ್ತಿಪರಿಚಯ ) ಪುಸ್ತಕಗಳು ಬೇಕು.ಅದು ಮಹಾತ್ಮಗಾಂಧಿ, ಪಟೇಲ್ ನೆಹರು ಇಂತಹವರದು .ಇದನ್ನು ಮೂರು ತಿಂಗಳಲ್ಲಿ ಬರೆ ದು ಕೊಡುವುದಾದರೆ ಒಂದು ಪುಸ್ತಕಕ್ಕೆ ಐವತ್ತು ರೂಪಾಯಿನಂತೆ ಐದು ಸಾವಿರ ರೂಪಾಯಿ ಕೊ ಡ್ತೀನಿ ಅಂದಾಗ ಅವನ ಕಣ್ಣ ಮುಂದೆ ಇದ್ದದ್ದು ಮಗಳ ಮದುವೆ ಮಾತ್ರ ಒಪ್ಪಿಕೊಂಡು ಬಿಟ್ಟ. ಅಲ್ಲೇ ಒಂದು ಕಾಗದದ ಮೇಲೆ ಇವನ ರುಜು ಮಾಡಿಸಿಕೊಂಡು ನೂರು ರೂಪಾಯಿ ಮುಂಗಡ ಹಣ ಕೊಟ್ಟಾಗ ಮನೆಗೆ ಬಂದು ಹೆಂಡತಿಗೆ ಆ ಹಣ ಕೊಟ್ಟು ಹೆದರ ಬೇಡ ನನಗೆ ಐದುಸಾವಿರ ರೂಪಾಯಿ ಕಾಂಟ್ರಾಕ್ಟ್ ಸಿಕ್ಕಿದೆ ಹೇಗಾದರೂ ಕ ಷ್ಟಪಟ್ಟು ಮದುವೆ ಮಾಡೋಣ ಅಂದಾಗ ಅ ವರು ನಂಬಲೇ ಇಲ್ಲ. ಆಗ ಪೆನ್ ಬಗ್ಗೆ ಕೇಳಿದ. ಮಗಳು ಓಡಿ ಹೋಗಿ ತಂದು ಕೊಟ್ಟಳು. ಕ್ಯಾಪ್ ಇವನ ಜೇಬಿನಲ್ಲೇ ಇತ್ತು. ಸರಸ್ವತೀ ವಾಪಸ್ ಬಂದಳು ಅಂತ ಬರೆಯಲು ಕೂತ. ಮೂರು ತಿಂಗಳು ಸಮಯ ಇದ್ದರೂ ಎರಡೇ ತಿಂಗಳಲ್ಲಿ ಹಗಲು ರಾತ್ರಿ ಕೂತು ಬರೆದು ಮುಗಿಸಿದ. ಇವನು ಬರೆಯುತ್ತಿದ್ದ ಹಾಗೆಲ್ಲ ಎರಡು ಮೂರು ಮುದ್ರಣಗಳನ್ನ ಕಂಡಿತ್ತು. ಅದುವರೆಗೂ ಒಂದು ಸಾವಿರ ರೂಪಾಯಿ ಮಾತ್ರ ತೆಗೆದುಕೊಂಡಿದ್ದ. ನೂರು ಪುಸ್ತಕಗಳು ಪ್ರಕಟವಾಗಿದ್ದಕ್ಕೆ ಒಂದು ಸಮಾರಂಭ ಏರ್ಪಾಟಾಯ್ತು .ಎಲ್ಲರೂ ಸ್ವಾಮಿಯನ್ನ ಹೊಗಳುವರೇ.ಅಲ್ಲಿಯವರೆಗೂ ಅಂತಹ ದೊಡ್ಡ ಸಮಾರಂಭ ಸ್ವಾಮಿ ಕಂಡಿ ರಲಿಲ್ಲ. ಮಾರನೇ ದಿನ ಆರ್ಮುಗಮ್ ಚೆಟ್ಟಿಯಾ ರ್ ಹತ್ತಿರಹೋದ .ಸಮಾರಂಭ ಎಲ್ಲಾ ಚೆನ್ನಾಗಿ ಆಯ್ತು ಬಹಳ ಸಂತೋಷ ವಾಯ್ತು ಅಂತ ಹೇಳಿದ. ಉಳಿದ ನಾಲ್ಕು ಸಾವಿರ ಕ್ಯಾಶ್ ಕೊಡ್ತಿ ರೋ ಇಲ್ಲ ಚೆಕ್ಕೋ ಅಂದಾಗ ಯಾವ ನಾಲ್ಕು ಸಾವಿರ ಆಗಾಗ ನೀವೇ ತೆಗೆದು ಕೊಂಡಿರೋದನ್ನ ಲೆಕ್ಕ ಹಾಕಿದರೆ ಒಟ್ಟು ಆರು ಸಾವಿರ ಆಗುತ್ತೆ ನೀವೇ ಸಾವಿರ ವಾಪಸ್ ಕೊಡಬೇಕು ಆದರೆ ನೀವೇನು ಆ ಸಾವಿರ ಕೊಡ ಬೇಡಿ ಮೂರು ತಿಂಗಳ ಒಳಗೇ ಮುಗಿಸಿ ಕೊಟ್ಟಿದ್ದೀರಿ ಅದಕ್ಕೆ ಬೋನಸ್ ಅಂತ ಇಟ್ಟಿಕೊಳ್ಳಿ ಅಂದ. ನೀವು ಸೀರಿಯಸ್ ಮನುಷ್ಯ ಅಂದು ಕೊಂಡಿದ್ದೆ ಆದರೆ ತಮಾಷೆ ಕೂಡ ಮಾಡುತ್ತೀರಿ ಪರವಾಗಿಲ್ಲ ಅಂದ. ನಾನು ವ್ಯಾಪಾರಿ ಯಾವತ್ತಿಗೂ ಬ್ಯುಸಿನೆಸ್ ವಿಷಯದಲ್ಲಿ ತಮಾಷೆ ಮಾಡಲ್ಲ ಅಂದ . ಮತ್ತೆ ಇದು ಏನು ತಮಾಷೆ ಅಲ್ಲದೇ. ಇಲ್ಲಾ ನೀವೇ ಸಾವಿರ ಕೊಡಬೇಕು ಅಂದು ಬಿಟ್ಟ. ಸುಳ್ಳು ಏಕೆ ಹೇಳ್ತೀರಿ ಅಂದಾಗ ಸುಳ್ಳಲ್ಲ ಸತ್ಯ ಯಾರನ್ನ ಬೇಕಾದ್ರು ಕೇಳಿ ನೀವು ಹಣ ಪಡೆದದ್ದಕ್ಕೆ ಸಹಿ ಮಾಡಿದ್ದೀರಿ ನೋಡಿ ಅಂತ ದೂರದಿಂದಲೇ ಕಾಗದ ತೋರಿಸಿದ .ಸಾಹುಕಾರ ಆರ್ಮುಗಮ್ ಇಷ್ಟು ಮೋಸ ಮಾಡ್ತಾನೆ ಅಂತ ತಿಳಿದಿರಲಿಲ್ಲ. ಕೋಪ ನೆತ್ತಿ ಗೇರಿತು. ಸುತ್ತಲೂ ನೋಡಿದ ಸಾಹುಕಾರ ಬಿಟ್ಟು ಮತ್ಯಾರು ಅಲ್ಲಿ ಇರಲಿಲ್ಲ . ಹೊರಗೆ ಬಂದ .ಅಲ್ಲಿ ಬಿದ್ದಿದ್ದ ಒಂದು ದಪ್ಪ ಕಲ್ಲು ತೆಗೆದು ಕೊಂಡು ಹಿಂದಿನಿಂದ ಬಂದು ತಲೆಗೆ ಜೋರಾಗಿ ಬಡಿದ . ಕಲ್ಲನ್ನ ತನ್ನ ಬ್ಯಾಗ್ ನಲ್ಲೇ ಹಾಕಿಕೊಂಡು ಮನೆಗೆ ಬಂದ .ಕಲ್ಲನ್ನ ಚೆನ್ನಾಗಿ ತೊಳೆದು ಹೊರೆಗೆ ಬಿಸಾಡಿದ .ಬ್ಯಾಗ್ ನ ರಕ್ತದ ಕರೆಗಳನ್ನು ತೊಳೆಯಲು ನೋಡಿದ ಆಗಲಿಲ್ಲ. ಬ್ಯಾಗ್ ನ ಸುಟ್ಟು ಹಾಕಿ ಸ್ನಾನ ಮಾಡಿ ಮತ್ತೆ ಆದೇ ಸಾಹುಕಾರನ ಕಚೇರಿ ಹತ್ತಿರ ಬಂದ. ಸುತ್ತ ಲೂ ಪೋಲಿಸರು ಜನವೋ ಜನ. ಯಾರನ್ನೋ ಏನೂ ತಿಳಿಯದವನ ಹಾಗೆ ಕೇಳುತ್ತಿದ್ದಾಗ ಒಬ್ಬ ಪೊಲೀಸ್ ಅಧಿಕಾರಿ ಬಂದು ಬನ್ನಿ ಸಾರ್ ಆರ್ಮುಗಮ್ ಸಾಯೋವಾಗ ನಿಮ್ಮ ಹೆಸರನ್ನ ಹೇಳಿದ್ದಾನೆ ಅಂದಾಗ ಪಾಪ ಎಷ್ಟು ಒಳ್ಳೆಯವರು ನನಗೆ ಐದು ಸಾವಿರ ರೂಪಾಯಿ ಬಾಕಿ ಕೊಡ ಬೇಕಿತ್ತು ಅದನ್ನೇ ಹೇಳಿರಬೇಕು ಅಂದ. ಇರಬ ಹುದು ಇದಕ್ಕೆ ಒಂದು ರುಜು ಮಾಡಿ ಅಂತ ಮಹಜರ್ ಮಾಡಿದ ಪತ್ರಗಳಲ್ಲಿ ಸಹಿ ಮಾಡಿಸಿ ಕೊಂಡರು. ಅಲ್ಲಿಂದ ಮನೆಗೆ ಬಂದ ಹೆಂಡತಿ ಮಗಳು ಹಣದ ಬಗ್ಗೆ ಕೇಳಿದ್ದಕ್ಕೆ ಅವನೇ ಇಲ್ಲ ಇನ್ನು ಹಣ ಎಲ್ಲಿಂದ ಅಂದು ಬಿಟ್ಟ . ಮಾರನೇ ದಿನ ಪೊಲೀಸ್ ಸ್ಟೇಷ ನ್ ನಿಂದ ಕರೆ ಬಂತು .ಸ್ವಲ್ಪವೂ ಅನುಮಾನ ಬರದ ಹಾಗೆ ಮಾತನಾಡುವುದನ್ನ ಇವನೇ ಎಷ್ಟೋ ಪತ್ತೆದಾರಿ ಕಾದಂಬರಿಗಳಲ್ಲಿ ಬರೆದಿದ್ದ. ಹಾಗಾಗಿ ಪೊಲೀಸರ ಮುಂದೆ ಮಾತನಾಡುವುದು ಸುಲಭ ವಾಯ್ತು. ಮದರಾಸ್ ನಿಂದ ಈ ದಿನ ನಾಯಿಗಳು ಬರ್ತಿದೆ. ನಮ್ಮ ಕೈಲಾಗದಿದ್ದರೂ ಅಫರಾಧಿ ಯನ್ನ ನಾಯಿ ಹಿಡಿದೇ ಹಿಡಿಯತ್ತೆ . ನಿಮ್ಮ ಐದು ಸಾವಿರದ ಬಗ್ಗೆ ಅವರ ಹೆಂಡತಿ ಹತ್ತಿರ ಹೇಳಿ ನಿಮಗೆ ಕೊಡಿಸುವ ಏರ್ಪಾಟು ಮಾಡ್ತೀವಿ ಯೋಚನೆ ಮಾಡಬೇಡಿ ಅಂದರು.
ಈಗ ಸ್ವಾಮಿಗೆ ನಿಜವಾಗಲೂ ಭಯ ಶುರು ವಾಯ್ತು. ಇವನ ಎಷ್ಟೋ ಪತ್ತೇದಾರಿಗಳಲ್ಲಿ ನಾಯಿಯೇ ಮುಖ್ಯ ಪಾತ್ರವಹಿಸಿ ಕಂಡು ಹಿಡಿದಿತ್ತು. ಯಾರೋ ಹೇಳಿದರು ನಾಯಿಗಳು ರೈಲ್ವೆ ಸ್ಟೇಶನ್ ಗೆ ಬಂತು ಅಂತ. ಸ್ವಾಮಿಯ ಮುಖದಲ್ಲಿ ಬೆವರು ಕಂಡು ಈ ಕಡೆ ಬನ್ನಿ ಫ್ಯಾನ್ ಕೆಳಗೆ ಅಂದರು ಇನ್ಸ್ಪೆಕ್ಟರ್. ನಿಜ ಒಪ್ಪಿಕೊಂಡು ಬಿಡು ಅಂತ ಒಳ ಮನಸು ಹೇಳ್ತಿದೆ. ಈಗ ಕೈಕಾಲು ನಡುಗುತ್ತಿದೆ. ಜೈಲು ನೇಣುಗಂಬ ಕಣ್ಣಮುಂದೆ ಬಂತು. ಭಯ ಹೆಚ್ಚಾಯ್ತು.ಏನು ಮಾಡೋದು ಅಂತ ತಿಳಿತಿಲ್ಲ. ನಾಯಿ ಬಂದಾಗ ನಾನು ಇಲ್ಲಿ ಇರಬೇಕಾ ಸ್ವಲ್ಪ ಕೆಲಸ ಇದೆ ಮನೆಗೆ ಹೋಗಬಹುದಾ ಅಂತ ಕೇಳಿದ ಸ್ವಾಮಿ. ಅಯ್ಯೋ ನೀವೇ ಮುಖ್ಯ ನೀವಿಲ್ಲ ಅಂದ್ರೆ ಹೇಗೆ ಅಂದರು ಇನ್ಸ್ಪೆಕ್ಟರ್.ಅಷ್ಟ ಹೊತ್ತಿಗೆ ಅಲ್ಲಿಗೆ ಬಂದವರು ಯಾರೋ ಹೇಳಿದ್ರು ನಾಯಿಗಳು ಇವರ ಮನೆ ಮುಂದೆ ಮೋರಿಯಲ್ಲಿ ವಾಸನೆ ನೋಡ್ತಾಯಿತ್ತು. ಜನ ನಗ್ತಾ ಇದ್ರು .ಮೋರಿ ವಾಸನೆ ನೋಡೋ ನಾಯಿ ಕಳ್ಳನ್ನ ಹೇಗೆ ಹಿಡಿ ಯತ್ತೆ ಅಂತ.ಒಬ್ಬ ಪೊಲೀಸ್ ಪೇದೆ ಅದು ಮೂಸಿನೋಡಿದ್ದ ಅದೇ ಕಲ್ಲನ್ನ ಪೇಪರ್ ನಲ್ಲಿ ಸುತ್ತಿ ತಂದಿದ್ದ . ಇದೇ ಸಾರ್ ಮುಖ್ಯವಾದ evidence .ಇದರಲ್ಲೇ ಅವನ ತಲೆಗೆ ಹೊಡೆದು ಸಾಯ್ಸಿರೋದು ಅಂತ ಹೇಳ್ದ. ಅದೇ ಸಮಯಕ್ಕೆ ನಾಯಿಗಳೂ ಒಳಗೆ ಬಂದು ಸ್ವಾಮಿಯ ಪಂಚೆ ಹಿಡಿದು ಎಳೆದಾಗ ಸ್ವಾಮಿ ಕಣ್ಣು ಮುಚ್ಚಿ ಜೋರಾ ನಾನೇ ನಾನೇ ಅಂತ.
ಈ ಕತೆ ನಿಜವಾಗಿ ಜನಕ್ಕೆ ಹೊಸರೀತಿ ಥ್ರಿಲ್ ಇರಲಿ ಅಂತ ಸ್ವಾಮಿನಾಥನ್ (ಸ್ವಾಮಿ)ತಾನೇ ಬರೆದ ಪತ್ತೇದಾರಿ .ಇದು ಜನಕ್ಕೆ ಎಷ್ಟು ನೈಜ ವಾಗಿತ್ತೆಂದರೆ ಅದೇ ಊರಿನಲ್ಲಿ ಒಬ್ಬ ಪುಸ್ತಕ ಪ್ರಕಾಶಕನ ಕೊಲೆ ಆಗಿತ್ತು.ಅವನು ಬಹಳ ಬರಹಗಾರರಿಗೆ ಹಣ ಕೊಡದೆ ಮೋಸ ಮಾಡಿ ದ್ದ .ಎಲ್ಲರಿಗೂ ಇವನ ಮೇಲೆ ಬಹಳ ಕೋಪ ಇತ್ತಾದರೂ ಏನೂ ಮಾಡುವಂತಿರಲಿಲ್ಲ.ಅವರೆಲ್ಲರ ಆಕ್ರೋಶ ಅರಿತು ಸೇಡು ತೀರಿಸಿ ಕೊಳ್ಳಲು ಹೀಗೆ ತಾನೇ ಕೊಲೆಗಾರನಂತೆ ಬರೆದು ಅಚ್ಚರಿ ಮೂಡಿಸಿದ್ದ ಸ್ವಾಮಿ . ಈ ಪುಸ್ತಕದಿಂದ ಅಪಾರ ಹಣವೇನೋ ಗಳಿಸಿದ ಜೊತೆಗೆ ಪೊಲೀಸರು ಬಹಳ ಪ್ರಯತ್ನ ಪಟ್ಟರೂ ಅಲ್ಲಿಯವರೆಗೂ ಕೊಲೆಗಾರನನ್ನ ಹಿಡಿಯಲು ಸಾಧ್ಯವಾಗದಿದ್ದಾಗ ಇವನನ್ನೇ ಅನುಮಾನಿಸಿ ಇದೇ ಪುಸ್ತಕದ ಆಧಾರ ದ ಮೇಲೆ arrest ಮಾಡಿ ನ್ಯಾಯಾಧೀಶರ ಮುಂದೆ ನಿಲ್ಲಿಸಿದಾಗ ಸತ್ಯವನ್ನು ಹೇಳುತ್ತಾ ಕೊಲೆಗೂ ನನಗೂ ಸಂಬಂಧವಿಲ್ಲ ಆದರೆ ನನ್ನ ಕತೆ ನನ್ನನ್ನೇ ಜೈಲಿಗೆ ತಳ್ಳುವಷ್ಟು ಪ್ರಭಾವಿಯಾಗಿರುವುದು ಇಂದು ನನಗೆ ಸಂತೋಷ ಎಂದ ನಕ್ಕನಂತೆ. ಹಿಂದಿನ ದಿನ ನ್ಯಾಯಾಧೀಶರೇ ಪುಸ್ತಕ ಓದಿದ್ದರಿಂದ ಅವನನ್ನ ಹೊಗಳಿ ಬಿಟ್ಟು ಕಳಿಸಿದರಂತೆ.
