Shridevi Patil

Inspirational Others Children

4  

Shridevi Patil

Inspirational Others Children

ಖುಷಿಯ ಮುಗ್ಧ ನಗು

ಖುಷಿಯ ಮುಗ್ಧ ನಗು

1 min
537



ನಾನ್ ಸ್ಟಾಪ್ ನವಂಬರ್ ಎಡಿಷನ್- ಆರಂಭಿಕ ಹಂತ :- ನಗು



ತಾಯಿಯೊಬ್ಬಳು ಒಂದು ಮಗುವಿಗೆ ಜನ್ಮ ನೀಡಿದಾಗ ಆ ತಾಯಿಯ ಜೀವನ ಸಾರ್ಥಕವಾದಂತೆ ಭಾವಿಸುತ್ತಾಳೆ. ಆ ಮಗುನಿನ ನಗು ನೋಡುತ್ತಾ, ತನ್ನ ನೋವನ್ನೆಲ್ಲ ಮರಿಯುತ್ತಾಳೆ.. ಮಕ್ಕಳೆಂದರೆ ಹಾಗೆ ಅಲ್ಲವೇ? ಮಕ್ಕಳ ಆ ಖುಷಿ , ಆ ಮುಗ್ಧ ನಗುವಿನಲ್ಲಿ ಏನೋ ಒಂದು ಜಾದು ಇದೆ ಅಂತ ಕಾಣುತ್ತೆ. ಲೋಕವನ್ನೇ ಮರೆಯುವ ಹಾಗೆ ಮಾಡುವ ಆ ಮಕ್ಕಳ ತುಂಟಾಟದಲ್ಲಿ, ಆ ನಗುವಿನಲ್ಲಿ ನಮ್ಮ ಖುಷಿಯೂ ಒಳಗೊಂಡಿದೆ.. ಮಕ್ಕಳೆಂದರೆ ಸ್ವರ್ಗ, ಮಕ್ಕಳೆಂದರೆ ಅಪ್ಪ ಅಮ್ಮನ ಜೀವನ ಎಲ್ಲವೂ ಆ ಮುದ್ದು ಮಕ್ಕಳೇ..


ರಾಧಾ ಮದುವೆ ಆದಮೇಲೆ ಅಪ್ಪ ಅಮ್ಮನನ್ನು ಬಿಟ್ಟು ಗಂಡನ ಮನೆಗೆ ಹೊರಟಾಗ ರಾಧಾಳ ಅಪ್ಪ ಮಗಳೇ , ನೀನಿಲ್ಲದ ಈ ಮನೆಯಲ್ಲಿ ನಗು ಇನ್ನೆಲ್ಲಿ, ಆದರೆ ನೀನು ಹೋಗುತ್ತಿರುವ ಆ ಮನೆಯಲ್ಲಿ ನಿನ್ನ ನಗುವಿನಿಂದ ಎಲ್ಲವನ್ನು ಗೆಲ್ಲು, ಎಲ್ಲರ ಮನಸ್ಸನ್ನು ಗೆಲ್ಲು. ಮನೆಯೆಂದ ಮೇಲೆ ಒಂದು ಮಾತು ಬರುತ್ತೆ , ಹೋಗುತ್ತೆ ಆದರೆ ಅದನ್ನು ದೊಡ್ಡದು ಮಾಡಬೇಡ ಎಂದು ಕಿವಿಮಾತೊಂದನ್ನು ಹೇಳಿದ್ದನು. ಅದೇ ಪ್ರಕಾರ ರಾಧಾ ಸಹ ತನ್ನ ಗಂಡನ ಮನೆಯಲ್ಲಿ ಎಲ್ಲರೊಂದಿಗೆ ನಗುನಗುತ್ತಾ ಖುಷಿಯಾಗಿ ಹೊಂದಿಕೊಂಡು ಬದುಕುತ್ತಿದ್ದಳು. 


ವರ್ಷ ಕಳೆಯುವುದರೊಳಗೆ ರಾಧಾಳ ಮಡಿಲು ತುಂಬಿತ್ತು. ಸೀಮಂತ ಮುಗಿದು ದಿನ ತುಂಬಿ, ಮುದ್ದಾದ ಹೆಣ್ಣು ಮಗುವಿಗೆ ಜನವಿತ್ತಿದ್ದಳು. ಮುದ್ದಿನ ಗೊಂಬೆಯಂತಿದ್ದ ರಾಧಾಳ ಮಗಳಿಗೆ ಐದು, ಆರು ವರುಷ ಕಳೆದರೂ ಮಾತೇ ಬರಲಿಲ್ಲ. ಮಗಳಿಗೆ ಖುಷಿ ಅಂತ ಹೆಸರಿಟ್ಟಿದ್ದರೂ ಮನೆಯಲ್ಲಿ ಮಾತ್ರ ನಗು , ಖುಷಿ ಇರಲಿಲ್ಲ. 


ಆಸ್ಪತ್ರೆ ಸುತ್ತಿ ಸುತ್ತಿ , ಕೊನೆಗೆ ಒಂದು ಆಪರೇಷನ್ ಆಗಿ , ಸ್ವಲ್ಪ ಸ್ವಲ್ಪ ಮಾತಾಡಲು ಶುರು ಮಾಡಿದಳು. ಇದರಿಂದ ಮನೆಯಲ್ಲಿ ಎಲ್ಲರ ಮುಖದಲ್ಲೂ ಖುಷಿಯ ಜೊತೆಗೆ ನಗುವನ್ನು ತಂದಳು. 


ಮನೆಯಲ್ಲಿ ಮುದ್ದು ಮಕ್ಕಳ ತೊದಲು ಮಾತಿನಿಂದ , ಮುದ್ದು ಮುದ್ದು ತುಂಟಾಟಗಳಿಂದ ಎಲ್ಲರ ಮುಖದಲ್ಲೂ ನಗು ಕಾಣಬಹುದು.


Rate this content
Log in

Similar kannada story from Inspirational