ಜ್ಯೋತಿಷಿ
ಜ್ಯೋತಿಷಿ


ಒಬ್ಬ ಖ್ಯಾತ ಜ್ಯೋತಿಷಿ ಇದ್ದ. ಇವನ ಹೆಸರು ಅಕ್ಕಪಕ್ಕದ ಊರುಗಳಲ್ಲೆಲ್ಲ ಪ್ರಸಿದ್ಧವಾಗಿತ್ತು. ಇವನಿಗೆ ಒಂದು ಕೂದಲು ಕೊಟ್ಟರು ಸಾಕು ಅವರ ಭವಿಷ್ಯ ನಿಖರವಾಗಿ ಹೇಳಿ ಬಿಡುತ್ತಿದ್ದ . ಅಷ್ಟು ನಿಪುಣತೆ ಜ್ಯೋತಿಷ್ಯದಲ್ಲಿ. ಒಮ್ಮೆ ಇವನ ಸ್ನೇಹಿತನ ಜೊತೆ ನದಿಯ ದಂಡೆ ಮೇಲೆ ಬರುತ್ತಿದ್ದಾಗ. ಯಾವುದೋ ಹೆಂಗಸು ನದಿಗೆ ಹಾರಿಬಿಟ್ಟಳು. ಅಲ್ಲಿಗೆ ಓಡಿಹೋಗಿ ನೋಡುವಾಗ ಯಾರೋ ಅಲ್ಲಿದ್ದವರು ಬಹಳ ಕಷ್ಟ ಪಟ್ಟು ಮೇಲೆ ತಂದರೂ ಅವಳ ಪ್ರಾಣ ಉಳಿಸಲಾಗಲಿಲ್ಲ . ಕುತೂಹಲಕ್ಕೆ ಅವಳ ತಲೆಯ ಒಂದು ಕೂದಲು ಕಿತ್ತುಕೊಂಡು ತೆಗೆದುಕೊಂಡು ಬಂದ. ಜ್ಯೋತಿಷಿಯ ಸ್ನೇಹಿತ ಕೇಳಿದ ಬದುಕಿದ್ದವರ ಭವಿಷ್ಯ ಹೇಳುವ ನೀನು ಸತ್ತವರ ಬಗ್ಗೆ ಹಿಂದಿನದು ಮಾತ್ರ ಹೇಳಬಹುದಾದರೆ ಅದು ಯಾರಿಗೆ ಬೇಕು . ನನಗೆ ಬೇಕು ಈ ಕೂದಲು ಹೇಳುತ್ತೆ ಆ ಹೆಂಗಸಿನ ಕಷ್ಟ ಇನ್ನೂ ಕಳೆದಿಲ್ಲ.ಇನ್ನೂ ಬಹಳಹೊಡೆತ ತಿನ್ನುವುದು ಬಾಕಿ ಇದೆ. ಆದರೆ ಆಕೆ ಇಲ್ಲ . ಇದೇ ಕುತೂಹಲ ಅದಕ್ಕೆ ಸಂಶೋದನೆ ಮಾಡಲು ತೆಗೆದುಕೊಂಡೆ ಎಂದ. ಪ್ರತಿದಿನ ರಾತ್ರಿ ಹೆಂಡತಿ ಮಲಗಿದ ಮೇಲೇ ತಾನೊಬ್ಬನೇ ಬಂದು ಆ ಕೂದಲನ್ನು ತೆಗೆದು ಒಂದು ಕಾಗದದ ಮೇಲಿಟ್ಟು ಏನೋ.ಲೆಕ್ಕಾ ಹಾಕುತ್ತಾ ಬರೆಯುತ್ತಿದ್ದ. ಹೆಂಡತಿಗೆ ಏನೋ ಅನುಮಾನ. ಪಕ್ಕದಮನೆಯ ಹೆಂಗಸಿಗೆ ಈ ವಿಷಯ ತಿಳಿಸಿದಾಗ , ಆಯ್ತು ಈ ದಿನ ನಾನು ಕಂಡು ಹಿಡಿಯುತ್ತೇನೆ ಅಂತ ಹೇಳಿ ರಾತ್ರಿ ಹನ್ನೆರಡು ಗಂಟೆಗೆ ಕಿಟಕಿ ಬಾಗಿಲ ಬಳಿ ಬಂದು ನೋಡಿದಳು.ಕೂದಲು ಇಟ್ಟುಕೊಂಡು ಏನೋ ಒಬ್ಬನೇ ಮಾತನಾಡುತ್ತಿದ್ದಾನೆ. ಮಾರನೇ ದಿನ ಆ ಹೆಂಗಸು ಹೇಳಿದಳು ರೀ ನಿಮ್ಮ ಯಜಮಾನನಿಗೆ ನೀವೊಬ್ಬರೆ ಹೆಂಡತಿಯ ಅಥವಾ ಮತ್ತೊಬ್ಬಳುಇರೋದು ನಿಮಗೆ ಗೊತ್ತಿಲ್ಲವಾ .ಪ್ರತಿದಿನ ನಿಮ್ಮ ಗಂಡ ಆ ಹೆಂಗಸಿನ ಕೂದಲು ಹಿಡಿದು ಪ್ರೀತಿಯಿಂದ ಏನೇನೋ ಮಾತನಾಡುತ್ತಾರೆ. ನಾನು ಕಣ್ಣಿಂದ ಕಂಡೆ ಎಂದರು .ಮಾರನೇ ದಿನವೇ ಗಂಡ ಹೊರಗೆ ಹೋಗಿದ್ದಾಗ ಹೇಗೋ ಕಷ್ಟಪಟ್ಟು ಕೂದಲನ್ನು ತೆಗೆದು ಅಲ್ಲಿದ್ದ ಒರಳಲ್ಲಿ ಇಟ್ಟು ಚೆನ್ನಾಗಿ ಕುಟ್ಟುತ್ತಿದ್ದ ಸಮಯಕ್ಕೆ ಗಂಡ ಒಳಗೆ ಬಂದು ನೋಡಿದಾಗ ಅವನು ಗೆದ್ದೆ ಗೆದ್ದೆ ಅಂತ ಕೂಗಿದ್ದು ನೋಡಿ ಹೆದರಿದ ಹೆಂಡತಿಗೆ ಹೇಳಿದ ಈ ಕೂದಲು ಒಂದು ಹೆಂಗಸಿನದು. ಅವಳು ನದಿಯಲ್ಲಿ ಬಿದ್ದು ಸತ್ತು ಹೋದಳು . ಆದರೆ ನನ್ನ ಲೆಕ್ಕದ ಪ್ರಕಾರ ಇನ್ನೂ ಬಹಳ ಕಷ್ಟ ಪಡಬೇಕಾಗಿತ್ತು .ಆದರೆ ವ್ಯಕ್ತಿಬದುಕಿಲ್ಲ..ನನಗೆ ಕುತೂಹಲವಿತ್ತು ಅದಕ್ಕೆ ನಿನ್ನಿಂದಲೇ ಉತ್ತರ ಸಿಕ್ಕಿದೆ . ಕೂದಲನ್ನು ಚೆನ್ನಾಗಿನೀನು ಕುಟ್ಟಿದ್ದು ಬಾಕಿ ಉಳಿದಿದ್ದ ಹೊಡೆತ. ಪರಿಹಾರ ಸಿಕ್ಕಿದೆ . ನೋಡು ಜ್ಯೋತಿಷ್ಯ ಸುಳ್ಳಲ್ಲ ಎಂದ .ಅವಳಿಗೆ ಏನೂಅರ್ಥವಾಗಲಿಲ್ಲ.ಸುಮ್ಮನೆ ಮುಖ ನೋಡುತ್ತಿದ್ದಳು.