Shridevi Patil

Inspirational Others Children

4  

Shridevi Patil

Inspirational Others Children

ಜಾಣ ಮಕ್ಕಳು

ಜಾಣ ಮಕ್ಕಳು

1 min
486


ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.

ಮಕ್ಕಳು.


ರಾಧಾ ಮತ್ತು ಗೀತಾ ಒಂದೇ ಕಂಪೌಂಡಿನ ಒಳಗಡೆ ಇರುವ ಅಕ್ಕ ಪಕ್ಕದ ಮನೆಯವರು. ಇಬ್ಬರು ಸುಮಾರು ವರ್ಷಗಳಿಂದ ಒಂದೇ ಕಡೆ ಇದ್ದವರು. ಸ್ನೇಹಿತರಲ್ಲದವರು , ಸಂಬಂಧಿಕರೂ ಅಲ್ಲದವರು , ತುಂಬಾ ಅನ್ಯೋನ್ಯೆತೆಯಿಂದ ಇದ್ದ ರಾಧಾ ಮತ್ತು ಗೀತಾ ಬೇರೆ ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದರು. 


ರಾಧಾಳಿಗೆ ಇಬ್ಬರು ಗಂಡು ಮಕ್ಕಳಿದ್ದರು. ಗೀತಾಳಿಗೆ ಒಬ್ಬ ಹೆಣ್ಣು ಮಗಳಿದ್ದಳು. ಮೂವರು ಮಕ್ಕಳು ಒಟ್ಟಿಗೆ ಆಡುತ್ತಿದ್ದರು. ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು. ಮೂವರು ಒಡಹುಟ್ಟಿದವರಂತೆ ಖುಷಿಯಾಗಿ ಇರುತ್ತಿದ್ದರು. ರಾಧಾಳ ಮಕ್ಕಳು ಸ್ವಲ್ಪ ದೊಡವರಿದ್ದ ಕಾರಣ ಗೀತಾಳ ಮಗಳನ್ನು ಮುದ್ದಿನ ತಂಗಿ ಎಂದು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. 


ಮಕ್ಕಳು ದೇವರು ಸಮಾನ. ಮಕ್ಕಳ ಮನಸ್ಸಲ್ಲಿ ಬಿತ್ತುವ ಬೀಜದ ಫಲ ಸಿಹಿಯಾಗಬೇಕಾದರೆ ನಾವು ಕೊಡುವ ಸಂಸ್ಕಾರದ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆಯೇ ರಾಧಾ ಮತ್ತು ಗೀತಾ ಇಬ್ಬರ ಮಕ್ಕಳು ಸಂಸ್ಕಾರವಂತರು , ಗುಣವಂತರು , ಜಾಣರು , ಹಿರಿಯರಿಗೆ ಗೌರವ ಕೊಡುವ ಈ ಮಕ್ಕಳು ಓದಿನಲ್ಲೂ ಮುಂದಿದ್ದರು. ಗೀತಾಳ ಮಗಳನ್ನು ಸ್ವಂತ ಅಣ್ಣಂದಿರಂತೆ ಆಕೆಯೊಂದಿಗೆ ನಡೆದುಕೊಳ್ಳುತ್ತಿದ್ದರು. ಯಾರಾದರೂ ಏನಾದರೂ ಅಂದರೆ , ಕಾಡಿಸುತ್ತಿದ್ದರೆ ಆಕೆಗೆ ರಾಧಾಳ ಮಕ್ಕಳು ರಕ್ಷಣೆ ಕೊಡುತ್ತಿದ್ದರು. ಒಟ್ಟಾರೆಯಾಗಿ ತುಂಬಾ ಒಳ್ಳೆಯ ಮಕ್ಕಳಾಗಿದ್ದರು. 



ಹೀಗೆ ನಾವು ಮಕ್ಕಳಲ್ಲಿ ಯಾವ ರೀತಿಯ ಗುಣಗಳನ್ನು ಬೆಳೆಸುತ್ತೇವೆಯೋ ಹಾಗೆಯೇ ಮಕ್ಕಳು ಬೆಳೆಯುತ್ತಾರೆ ಎನ್ನುವುದಕ್ಕೆ ಈ ಮಕ್ಕಳೇ ಸಾಕ್ಷಿ.



Rate this content
Log in

Similar kannada story from Inspirational