ಜಾದು
ಜಾದು
ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್
ಜಾದೂಗಾರನೊಬ್ಬನ ಆಗಮನವಾಗಿತ್ತು ಊರಿಗೆ. ಊರಿನ ಹಿರಿ-ಕಿರಿಯರೆಲ್ಲ ತಮ್ಮ ಮಕ್ಕಳ ಸಮೇತ ಜಾದೂಗಾರನ ಜಾದೂ ನೋಡಲು ಬಂದಿದ್ದರು. ಜಾದೂಗಾರನ ಕೈಯಲ್ಲಿ ಒಂದು ಕೋಲು, ತಲೆಯ ಮೇಲೊಂದು ಟೋಪಿ, ಬಿಳಿ ಅಂಗಿ, ಕಪ್ಪು ಕೋಟು, ನೋದಿದರೆ ಅವನೊಬ್ಬ ದೊಡ್ಡ ಜಾದೂಗಾರ ಎನ್ನಲು ಅವೆಲ್ಲ ಸಾಕಿತ್ತು.
ಇಲ್ಲಿ ನೋಡಿ ಮಕ್ಕಳೇ ನಾನು ನಿಮಗೆಲ್ಲಾ ಒಂದು ಜಾದು ತೋರಿಸುವೆ.
ಮಕ್ಕಳೆಲ್ಲಾ ಕಣ್ಣುಬಾಯಿ ತೆರೆದುಕೊಂಡು ನೋಡುತ್ತಿದ್ದವು.
ಎನ್ ಮಾಡ್ತಿದೀರಾ ಜಾದುಮಾಮಾ?
ನಾನು ಇವತ್ತು ನಿಮಗೆಲ್ಲಾ ನೀರಲ್ಲಿ ದೀಪಾ ಹಚ್ಚುವುದನ್ನು ತೋರಿಸುತ್ತೇನೆ.
ಹಾ ನೀರಲ್ಲಿ ದೀಪಾನಾ.?
ಮಕ್ಕಳನ್ನು ಮಾತಾಡಿಸುತ್ತಾ ಒಂದು ಗಾಜಿನ ಗ್ಲಾಸ್ನಲ್ಲಿ ನೀರು ಹಾಕಿ ಎಣ್ಣೆಯಲ್ಲಿ ಅದ್ದಿದ ಬತ್ತಿಯನ್ನು ಮೇಲೆ ತೇಲುವಂತೆ ಮಾಡಿ ದೀಪವನ್ನು ಹಚ್ಚಿದನು.
ಮಕ್ಕಳೆಲ್ಲಾ ಅದನ್ನಾ ನೋಡಿ ನೀರಲ್ಲಿ ದೀಪವನ್ನು ಹಚ್ಚಿದರು ಎಂದು ಜೋರಾಗಿ ಚಪ್ಪಾಳೆ ಹೊಡೆದು ನಕ್ಕರು.
ಮಕ್ಕಳಿಗೆ ಜಾದೂಗಾರನ ಜಾದೂ ತುಂಬ ಇಷ್ಟವಾಗಿ ಬಿಟ್ಟಿತು.
ಚಿಕ್ಕ ಸಂಗತಿಗಳನ್ನೇ ದೊಡ್ಡದಾಗಿ ಬಿಂಬಿಸಿದ ಜಾದೂಗಾರನ ಜೇಬು ತುಂಬಿತ್ತು.
(ಮಕ್ಕಳಿಗೆ ಮೇಲೆ ತೇಲುವ ಎಣ್ಣೆ ಮತ್ತು ಬತ್ತಿ ಕಾಣಿಸದಂತೆ ಮಾತ್ರೆ ತೆಗೆದುಕೊಂಡ ಮೇಲೆ ಉಳಿದ ಬಿಳೆಯ ಪ್ಲಾಸ್ಟಿಕ್ ಗೆ ಒಂದು ಚಿಕ್ಕ ತೂತು ಮಾಡಿ ಬತ್ತಿ ಯನ್ನು ಎಣ್ಣೆಯಲ್ಲಿ ಅದ್ದಿ ಹಚ್ಚಿದರೆ ಅದು ಆರಾಮಗಿಯೇ ಉರಿಯುತ್ತೆ)
ಮಕ್ಕಳನ್ನು ಮಾತಿಗೆ ಸೆಳೆದು ಮಾಡುವ ಜಾದುಗಳು ತುಂಬಾ ಇವೆ........ ಬನ್ನಿ ಬನ್ನಿ ಮುಂದೆ ಜಾದು ಮಾಡುವುದು ಇದೆ.
