ಹೆತ್ತ ಕರುಳು
ಹೆತ್ತ ಕರುಳು
ತನ್ನ ಮಗ ಮಾಡಬಾರದ ತಪ್ಪನ್ನು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದನಲ್ಲ ಎಂದು ರೋಧಿಸಿತು ಆಕೆಯ ಮನ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಅಕ್ಕಪಕ್ಕದವರೆಲ್ಲ "ಅದೆಂಥ ತಾಯಿಯೋ..! ನೆಟ್ಟಗೆ ಇದ್ದೊಬ್ಬ ಮಗನನ್ನು ಬೆಳೆಸಲಿಕ್ಕೆ ಆಗಲಿಲ್ಲವಲ್ಲ ನಿನಗೆ..?!" ಎಂದು ವ್ಯಂಗ್ಯವಾಡುತ್ತಿದ್ದರು. ತನಗಿರುವ ಏಕೈಕ ಆಧಾರ ಸ್ತಂಭ ಮುಂದೆ ತನ್ನ ಜೊತೆ ಇರುವುದಿಲ್ಲವಲ್ಲ ಎಂದು ಅಳುವುದೇ ಅಥವಾ ಇಂತಹ ಮಗನಿಗೆ ಯಾಕಾದರೂ ಜನ್ಮ ಕೊಟ್ಟೆ ಎಂದು ಬೇಸರಿಸಲೇ ಎಂದು ಮೌನವಾಗಿ ಅತ್ತಿತು ಆ ಹೆತ್ತ ಕರುಳು..!!
