ದೀಪಗಳ ಬೆಳಕಿನಲ್ಲಿ
ದೀಪಗಳ ಬೆಳಕಿನಲ್ಲಿ
ಸೌಮ್ಯ ಬಹಳ ಕಡು ಕುಟುಂಬದಲ್ಲಿ ಜನಿಸಿದವಳು. ಮಲೆನಾಡಿನ ದಟ್ಟ ಅಡವಿಯ ನಡುವಲಿ ಆಕೆಯ ಕುಟುಂಬ ನೆಲೆಯೂರಿತ್ತು. ಸುತ್ತಮುತ್ತಲು ಹತ್ತು ಹಲವು ಮನೆಗಳು ಒಂದೇ ಕಡೆ ಇದ್ದ ಕಾರಣ ಪ್ರತಿಯೊಂದು ಮನೆಯ ವಿಚಾರಗಳು ಪ್ರತಿಯೊಂದು ಮೂಲೆಗೂ ತಲುಪಿತ್ತು. ಸುತ್ತಲು ದಟ್ಟ ಅಡವಿಯೇ ಇದ್ದ ಕಾರಣ ಪಟ್ಟಣವು 7 ಕಿ.ಮೀ ದೂರದಲ್ಲಿತ್ತು. ಅದಾವ ವಸ್ತುಗಳನ್ನು ತರಬೇಕಾದರೂ ಸಹ ನಡೆದುಕೊಂಡು ಹೋಗಿ ತರಬೇಕಿತ್ತು. ತೈಲವಾಹನ ಅಂದರೆ ಬಸ್ ವ್ಯವಸ್ಥೆ ಆ ಹಳ್ಳಿಗೆ ಇರಲಿಲ್ಲ. ಬೈಕ್ ಕಾರುಗಳಂತೂ ದೂರದ ಮಾತು. ಸೌಮ್ಯಳಿಗೆ ಪಟ್ಟಣಕ್ಕೆ ಹೋಗುವುದು ಎಂದರೆ ಅದೇನೋ ಸಂಭ್ರಮ. ಅದಾವ ಪುಟ್ಟ ಖರೀದಿಗೆ ಇರಲಿ ಸೌಮ್ಯ ಮನೆಯವರೊಂದಿಗೆ ಪಟ್ಟಣಕ್ಕೆ ಹೋಗಿಯೇ ಬಿಡುತ್ತಿದ್ದಳು. ಎಲ್ಲಾ ಹಬ್ಬಗಳು ಜನರಿಗೆ ಸಂಭ್ರಮ ನೀಡುತ್ತಿದ್ದರು ಸಹ ಸೌಮ್ಯಳಿಗೆ ಹಬ್ಬಗಳು ಬಂತೆಂದರೆ ಸಾಕು ಬೇಸರದ ದಿನಗಳು ಪ್ರಾರಂಭವಾದಂತೆ. ಯಾಕೆ ಎಂದು ಕೇಳಿದಿರಾ???? ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೆ ಈಕೆಯ ಮನೆಯಲ್ಲಿ ಸಂಭ್ರಮದ ಛಾಯೆ ಇರುತ್ತೀರಲಿಲ್ಲ. ದೀಪಾವಳಿ ಬಂತೆಂದರೆ ಸಾಕು ಪ್ರತಿಯೊಂದು ಮನೆಯಲ್ಲೂ ಹಣತೆಗಳ ಸಾಲು ದೀಪಗಳು ಬೆಳಗುತ್ತಿದ್ದರೆ, ಈಕೆಯ ಮನೆಯಲ್ಲಿ ಬರಿ ಒಂದೇ ಒಂದು ದೀಪ ಮಾತ್ರ ಉರಿಯುತ್ತಿತ್ತು. ಮನೆ ಮನೆಯಲ್ಲಿ ಪಟಾಕಿಯ ಬೆಳಕು ಪಸರಿಸುತ್ತಿದ್ದರೆ ಈ ಕೀಯ ಮನೆ ಅಂದಕಾರದ ಮಡಿಲಲ್ಲಿ ಮಲಗಿದಂತಿತ್ತು. ಯುಗಾದಿ ಬಂತೆಂದರೆ ಸಾಕು, ಉಳಿದವರ ಮನೆಯಲ್ಲಿ ಬೇವು ಬೆಲ್ಲ ಸಿಹಿಯೂಟ ಮುಂತಾದ ರೀತಿಯ ಸಂಭ್ರಮ ಸೂಚಕ ಆಚರಣೆಗಳು ಇರುತ್ತಿದ್ದರೆ, ಸೌಮ್ಯ ಲ ಮನೆಯಲ್ಲಿ ಅದೇ ರಾಗಿ ಗಂಜಿ. ಅಕ್ಕ ಪಕ್ಕದ ಮನೆಯಲ್ಲಿ ಇವರಿಗಾಗಿ ಕೊಟ್ಟರೆ ಒಂದಿಷ್ಟು ಬೇವು ಬೆಲ್ಲ ಇರುತ್ತಿತ್ತು ಅಷ್ಟೇ... ನಾಗರ ಪಂಚಮಿಯಂದು ಉಳಿದ ಮನೆಯವರೆಲ್ಲ ಹಾವಿಗೆ ಹಾಲೆರೆಯಲು ರಾಶಿಗಟ್ಟಲೆ ಹಾಲಿನ ಪಾತ್ರೆಗಳನ್ನು ಹೊತ್ತು ತರುತ್ತಿದ್ದರೆ, ಇವರ ಮನೆಯಲ್ಲಿ ಇವರಿಗೂ ಕುಡಿಯಲು ಹಾಲಿರುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಸೌಮ್ಯಳಿಗೆ ಹಬ್ಬಗಳು ಬಂತೆಂದರೆ ಸಾಕು, ನಮ್ಮ ಮನೆಯ ಬಡತನ ಊರಿಡಿ ಪ್ರದರ್ಶನವಾದಂತೆ ಭಾಸವಾಗುತ್ತದೆ. ಅದೆಷ್ಟೇ ವರ್ಷಗಳು ಕಳೆದರೂ ಸಹ ಪರಿಸ್ಥಿತಿ ಬದಲಾಗಲಿಲ್ಲ. ಆಕೆಗೆ 21 ವರ್ಷವಾಯಿತು. ಅದೆಷ್ಟೋ ಸಂಬಂಧಗಳು ಇವರ ಬಡತನದ ಕಾರಣದಿಂದಾಗಿ ದೂರ ಸರಿದರು. ಆಕೆಯ ಜೀವನದಲ್ಲಿ ಮದುವೆಯ ಕನಸು ಕನಸಾಗಿ ಉಳಿಯುವ ಎಲ್ಲಾ ಸಾಧ್ಯತೆಗಳಿದ್ದವು. ಹೀಗಿರುವಾಗ ಒಂದು ದಿನ ಅವರ ಊರನ್ನು ಕಾರಿನಲ್ಲಿ ಪ್ರವೇಶಿಸಿದ ನಿರಂಜನ್ ಎಂಬವನು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಈಕೆಯನ್ನು ನೋಡಿ ಪ್ರೀತಿಯ ಬಲೆಯೊಳಗೆ ಬಿಡುತ್ತಾನೆ. ಈಕೆಯ ಹಿನ್ನೆಲೆ ಏನನ್ನೂ ವಿಚಾರಿಸದೆ ಸೀದಾ ಆಕೆಯ ಬಳಿ ಹೋಗಿ ತನ್ನ ಮನದ ಮಾತನ್ನು ವ್ಯಕ್ತಪಡಿಸುತ್ತಾನೆ. ಮದುವೆಯ ಕನಸು ನನಸಾಗಬಹುದು ಎಂಬ ಒಂದೊಮ್ಮೆ ಗೆ ಖುಷಿ ಪಟ್ಟಳಾದರೂ, ತನ್ನನ್ನು ಈ ಶ್ರೀಮಂತ ವ್ಯಕ್ತಿ ಮದುವೆಯಾಗಬಹುದೆಂದು ಅವಳು ಅಂದುಕೊಳ್ಳಲಿಲ್ಲ. ಆತನ ಪ್ರೇಮ ನಿವೇದನೆಯನ್ನು ನಿರಾಕರಿಸಿ ಸೀದಾ ತನ್ನ ತಂದೆ ತಾಯಿಯ ಬಳಿಗೆ ಈ ವಿಚಾರವನ್ನು ಹೇಳಲೆಂದು ಮನೆಗೆ ಓಡಿ ಬಂದಳು. ಶ್ರೀಮಂತ ಹುಡುಗನು ಈಕೆಯನ್ನು ಹಿಂಬಾಲಿಸಿ ಆಕೆಯ ಮನೆ ತಲುಪಿದ. ಮೃದು ಸ್ವಭಾವದಿಂದಲಿ ಆಕೆಯ ತಂದೆ ತಾಯಿಯನ್ನು ಒಪ್ಪಿಸುವ ಕಾರಣದಿಂದಾಗಿ ಪರಿಪರಿಯಾಗಿ ಒದ್ದಾಡಿದನು. ತನ್ನ ಶ್ರೀಮಂತಿಕೆಯೇ ಈ ತಿರಸ್ಕಾರಕ್ಕೆ ಕಾರಣವೆಂದು ತಿಳಿದು ಸಾಮಾನ್ಯವರ್ಗದ ವ್ಯಕ್ತಿ, ತನಗೆ ಈ ರೀತಿಯಾಗಿ ಹೊಸ ಬಟ್ಟೆಯನ್ನು ಧರಿಸಿ ಯಾವುದಾದರೂ ಊರಿನೊಳಗೆ ಪ್ರವೇಶಿಸಬೇಕೆಂಬುದು ಬಹು ದಿನಗಳ ಆಸೆಯಾಗಿತ್ತು. ಈ ಕಾರಣದಿಂದಾಗಿ ನಾನು ಶ್ರೀಮಂತನಂತೆ ಈ ಊರು ಪ್ರವೇಶಿಸಿದೆ ಎಂಬುದಾಗಿ ದೊಡ್ಡ ಸುಳ್ಳನ್ನು ಹೇಳುತ್ತಾನೆ. ಈ ಸುಳ್ಳನ್ನು ನಿಜವೆಂದು ನಂಬಿದ ಸೌಮ್ಯಳ ತಂದೆ ತಾಯಿ ಸೌಮ್ಯಳನ್ನು ಆತನಿಗೆ ಮದುವೆ ಮಾಡಿಕೊಟ್ಟರು. ಕೊನೆಗೂ ಸೌಮ್ಯಳ ಮದುವೆಯಾಯಿತು. ಸಂಭ್ರಮ ಸಡಗರದಿಂದಲೇ ತನ್ನ ಗಂಡನೊಂದಿಗೆ ತನ್ನ ಗಂಡನ ಮನೆ ಸೇರಲು ಸಿದ್ದಲಾದಳು. ಆ ಕಾರು ಇನ್ನೆರಡು ದಿನಗಳಲ್ಲಿ ಹಿಂದಿರುಗಿಸಬೇಕಾಗಿತ್ತು ಎಂಬುದಾಗಿ ಆಟ ಸುಳ್ಳು ಹೇಳಿದ್ದ ಕಾರಣ ಸೌಮ್ಯ ಆತನೊಂದಿಗೆ ಮದುವೆಯ ದಿನವೇ ಹೊರತು ನಿಂತಳು. ಅವರಿಬ್ಬರು ಕಾರಿನ ಮೂಲಕವಾಗಿ ತಮ್ಮ ಮನೆ ತಲುಪಿದರು. ಸೌಮ್ಯಳಿಗೆ ಆಶ್ಚರ್ಯವೋ ಆಶ್ಚರ್ಯ... ಇದುವರೆಗೂ ಶ್ರೀಮಂತಿಕೆಯ ಸುಖವನ್ನೇ ಅನುಭವಿಸದ ಸೌಮ್ಯಳು ತನ್ನ ಶ್ರೀಮಂತ ಪತಿಯ ಮನೆಯನ್ನು ನೋಡಿ ಆಶ್ಚರ್ಯದಿಂದ ನಿಂತು ಬಿಟ್ಟಳು. ಮುಂದಿನ ದಿನಗಳಲ್ಲಿ ಹಬ್ಬಗಳೆಲ್ಲವೂ ಆಕೆಯ ಜೀವನದಲ್ಲಿ ಸಂಭ್ರಮವನ್ನೇ ತುಂಬಿತ್ತು. ದೀಪಾವಳಿಯಂದು ಸಾವಿರಾರು ಹಣತೆಗಳು ಮನೆ ತುಂಬಾ ಕಾಣಸಿಗುತ್ತಿತ್ತು. ಜೊತೆಗೆ ಪಟಾಕಿಯ ಸದ್ದು ಗದ್ದಲ ಹಾಗೂ ಬೆಳಕು ಆಕೆಯ ಮನಸ್ಸಿಗೆ ಸಂತಸವನ್ನು ನೀಡುತ್ತಿತ್ತು.
