ಮದುವೆ
ಮದುವೆ
ಅದಾವ ಜನ್ಮದ ಪುಣ್ಯ ನಾನರಿಯೆ. ನಾನು ಯಾವ ರೀತಿಯ ವರನನ್ನು ಬಯಸಿದ್ದೇ ನೋ ಅದೇ ರೀತಿಯ ಗುಣಸ್ವಭಾವದವನಿತ. ರೂಪ ಲಾವಣ್ಯಕ್ಕೆ ಸೋತು ಹೋಗಿದ್ದೀನಿ ಕಣ್ಣನ್ನು ಸೆಳೆಯುವ ಆತನ ನಗುವು ನನಗೆ ಬಲು ಪ್ರಿಯ, ತಂಗಾಳಿಯಲ್ಲಿ ಬೆವರಿಳಿಸುವ ಈತನ ಕಣ್ಣುಗಳು ನನಗೆ ಸ್ವರ್ಗ, ನಡೆದಾಗಲೆಲ್ಲ ಧೂಳು ನಾಚಿ ಹಾರಿ ಹೋಗುತ್ತಿರಲು ನನ್ನ ಮನಕೆ ಏನೋ ಒಂದು ರೀತಿಯ ಮುಜುಗರ. ಯಾವ ಜನ್ಮದ ಪ್ರಿಯತಮನೋ ಏನೋ ಈ ಜನ್ಮದಿ ನನ್ನ ಬಾಳ ಸಂಗಾತಿಯಾಗಿ ಬರುತ್ತಿರುವನು, ಆತನ ಕಣ್ಣು ನೋಡಲು ನನ್ನ ಕಣ್ಣಿಗೆ ಧೈರ್ಯ ಸಾಲುತ್ತಿಲ್ಲ, ಆತನ ಎದುರು ನಿಲ್ಲಲು ನನ್ನ ಕಾಲುಗಳು ಮನಸ್ಸು ಮಾಡುತ್ತಿಲ್ಲ. ಅಯ್ಯೋ... ಅಯ್ಯೋ ...!! ಮಾತನಾಡಲು ಸ್ವರವೇ ಹೊರಡುತ್ತಿಲ್ಲ ನಡುಗುತ್ತಿದೆಯಲ್ಲಾ. ಆ ದಿನದ ಆಗಮನದ ಕ್ಷಣ ನೆನೆದರೆ ಮತ್ತೊಮ್ಮೆ ಆ ಸನ್ನಿವೇಶವು ಅದರಂತೆ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
(ಹುಡುಗಿಯನ್ನು ನೋಡಲು ಬರುವ ಸನ್ನಿವೇಶವನ್ನು ನೆನೆಸಿಕೊಳ್ಳುತ್ತಾಳೆ ಅಂದು ಆಕೆಯ ಖುಷಿಯ ದಿನವೂ ಹೌದು ಹಾಗೂ ದುಃಖದ ದಿನವೂ ಕೂಡ. ಯಾಕೆಂದು ಕೇಳಿದಿರಾ..?? ಅದಂತೂ ಬಹಳ ದೊಡ್ಡದಾದ ಕಥೆಯಲ್ಲ ಇದನ್ನು ನೀವು ಓದಬೇಕಾದರೆ ಮುಂದಿನ ಸಂಚಿಕೆಯ ಪ್ರಕಟಣೆವರೆಗೂ ಕಾಯಲೇಬೇಕು. ನಾನು ನಿಮ್ಮ ಪ್ರೀತಿಯ ಲೇಖಕಿ ಚೈತ್ರ ಆರ್ ದೇವಾಡಿಗ ನಿಮಗಾಗಿ ಆದಷ್ಟು ಬೇಗ ಮುಂದಿನ ಸಂಚಿಕೆಯನ್ನು ಪ್ರಕಟ ಮಾಡುತ್ತೇನೆ. ಅಲ್ಲಿವರೆಗೂ ಮುಂದಿನ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ ರಿ ನಾನು ಹೊಸ ಟ್ವಿಸ್ಟ್ ನೊಂದಿಗೆ ಈ ಕಥೆಯನ್ನು ಮುಂದುವರಿಸುತೇನೆ.)

