Be practical
Be practical


(ಪ್ರಿಯ ಓದುಗರೇ ಈ ಕಥೆ ಓದಿದ ಮೇಲೆ ನಿಮ್ಮಪ್ರಕಾರ ಸೂರ್ಯ ಮಾಡಿದ್ದು ಸರೀನಾ ತಪ್ಪಾ ಎಂದು ತಿಳಿಸಲು ಮರೆಯಬೇಡಿ....)
********
ಬಿ ಪ್ರಾಕ್ಟಿಕಲ್.. Be practical
ನಕ್ಷತ್ರಾ ನಮ್ಮ ಮುಂದಿನ ಜೀವನದಲ್ಲಿ ಕಷ್ಟವೋ ಸುಖವೋ ಜೊತೆಯಾಗಿ ನಡೆಯೋಣ. ನಾನು ಹಣದ ಲ್ಲಿ ಶ್ರೀಮಂತನಲ್ಲ ಆದರೆ ಹೃದಯ ಶ್ರೀಮಂತಿಕೆ ಇದೆ...ನಾನು ನನ್ನಜೀವಕ್ಕಿಂತಲೂ ಹೆಚ್ಚು ನಿನ್ನ ಪ್ರೀತಿಸುತ್ತೇನೆ. ಚಿನ್ನದ ಜೋಕಾಲಿಯಲಿ ನಿನ್ನ ತೂಗಲಾಗದಿದ್ದರು, ನನ್ನ ಬಾಹು ಬಂಧ ನದಲಿ ನಿನ್ನ ಜೋಪಾನ ಮಾಡಬಲ್ಲೆ.
ಇಂದು ನಾನು ಬಡವನಿರಬಹುದು ಆದರೆ ನನ್ನ ಕಣ್ಣಲ್ಲಿ ಕನಸಿದೆ.ನೀನು ಆ ಕನಸಿನ ಕಿಚ್ವಾದರೆ ನಾನು ಏನಾದರೂ ಸಾಧಿಸಬಲ್ಲೆ. ಹಾಗಾಗಿ ದುಡುಕಿ ನಮ್ಮಪ್ರೀತಿಯ ಕಡೆಗಣಿಸಬೇಡ. ಪ್ಲೀಸ್...
ಈ ಸೂರ್ಯ ನಿಲ್ಲದೆ ಈ ನಕ್ಷತ್ರಾ.ಇರುವುದುಂಟೇ..ಎಂದ ನಿನ್ನಮಾತುಗಳು ಇಷ್ಟು ಬೇಗ ಮರೆತು ಹೋಯಿತೇ . ಸೂರ್ಯ ಕೈ ಮುಗಿದು ನಕ್ಷತ್ರ ಳ ಬಳಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದರೆ
ಅವನ ಮಾತು ಕೇಳಿ ನಕ್ಷತ್ರ. ಗಹಗಹಿಸಿ ನಕ್ಕಳು.
ಸೂರ್ಯ ನಾವಿಬ್ಬರೂ ಪ್ರೀತಿಸಿದ್ದು ನಿಜ. ಅದು ಒಂದು ಕನಸು ಎಂದು ಮರೆತುಬಿಡು. ವಾಸ್ತವ ದಲ್ಲಿ ನಾವು ಜೀವಿಸಬೇಕು. ನಾನೀಗ ಇನ್ನೊಬ್ಬನನ್ನು ಮದುವೆಯಾಗಲಿರುವವಳು. ನಾನು ಮಧ್ಯಮವರ್ಗದ ಹುಡುಗಿ. ನಾನು ನಿನ್ನನ್ನು ಮದುವೆಯಾದರೆ ಮತ್ತೆ ಕಷ್ಟ ಗಳನ್ನೇ ಹೊದ್ದುಮಲಗಬೇಕಾಗುತ್ತದೆ. ನನಗೆ ಅದು ಬೇಕಾಗಿಲ್ಲ..ನಾನುಮದುವೆಯಾಗುವ ಹುಡುಗ ಶಶಾಂಕ್ ನಿನಗಿಂತ ರೂಪದಲ್ಲೂ ಹಣದಲ್ಲೂ ಮೇಲೆ ಇದ್ದಾನೆ. ಅವನನ್ನು ಮದುವೆಯಾದರೆ ನನ್ನಲೈಫ್ ಸೆಟ್ಲ್ ಆದಹಾಗೆ. ನಿನ್ನ ಪ್ರೀತಿಯ ಮಾತುಗಳೇನು ನನ್ನ ಹೊಟ್ಟೆ ತುಂಬಿಸುತ್ತದೆಯೋ? ಇವೆಲ್ಲ ಬರೀ ಕಥೆ ಕಾದಂಬರಿಗಳಲ್ಲಿ ಓದುವುದಕ್ಕಷ್ಟೆ ಚೆನ್ನಾಗಿರುತ್ತದೆ. ಮುಂದಿನವಾರ ನನ್ನ ಮದುವೆ ನೀನು ಬರದಿರುವುದೇ ಉತ್ತಮ. ಯಾಕೆಂದರೆ ಯಾವುದೇ ಹಳೆ ನೆನಪು ಗಳನ್ನು ನನ್ನ ಜೊತೆ ಮುಂದಿನ ಜೀವನಕ್ಕೆ ತೆಗೆದುಕೊಂಡು ಹೋಗುವುದು ನನಗೆ ಬೇಕಾಗಿಲ್ಲ "
ಎಂದು ಹೇಳಿ ನ ನಕ್ಷತ್ರ ಅಲ್ಲಿಂದ ಹೊರಡಲು ಸಿದ್ಧಳಾದಳು.
"ಬಟ್ ನಮ್ಮಇಷ್ಟು ದಿನದ ಪ್ರೀತಿ ?ನಿನ್ನ ಬಿಟ್ಟುನಾನು ಬದುಕುವುದೆಂತು? ಸೂರ್ಯ ನಕ್ಷತ್ರ ಳಿಗೆ ಕೇಳಿದಾಗ
ಸೂರ್ಯ "ಬಿ ಪ್ರಾಕ್ಟಿಕಲ್.. ಮನಸ್ಸಿದ್ದರೆ ಮಾರ್ಗವಿದೆ. ನೀನು ಯಾರನ್ನಾದರೂ ಮದುವೆ ಮಾಡಿಕೋ'
ಎಂದು ಹೇಳಿ ಅವನು ಕೂಗುತ್ತಿದ್ದರೂ ಕೇಳಿಸದಂತೆ ಅಲ್ಲಿಂದ ಮಾಯವಾದಳು.
ತನ್ನ ಪ್ಯಾಂಟ್ ಕಿಸೆಗೆ ಕೈ ಹಾಕಿ ಅವಳು ಹೋದ ಕಡೆ ನೋಡುತ್ತಾ ನಿಂತ ಸೂರ್ಯನ ಕೈಗೆ ಖಾಲಿ ಜೇಬಿನ ತಳ ಸೋಕಿದಾಗ.. ಈ ಖಾಲಿತನ ಇಂದು ನಾನವಳನ್ನು ಕಳೆದುಕೊಳ್ಳಲು ಕಾರಣವಾಯಿತೆಂದು ಕೊಂಡು ಹಲುಬಿದ.
.**********
ಹಲವು ವರುಷಗಳನಂತರ
ಸೂರ್ಯ ತನ್ನ ಆಫೀಸ್ ನಿಂದ ಮನೆಗೆ ಡ್ರೈವ್‌ಮಾಡುತ್ತಿದ್ದ. ಅದು ಕಂಪೆನಿಯ C.E.O ಆದಾಗ ಕಂಪನಿಯವರು ಕೊಟ್ಟಕಾರು.
ಕಷ್ಟ ಪಟ್ಟು ದುಡಿದ ಕಾರಣ ಹಂತ ಹಂತವಾಗಿ ಚಿಕ್ಕ ಕೆಲಸದಿಂದ ಮೇಲೇರಿದ್ದ.
ಒಳ್ಳೆ ಬಂಗ್ಲೆ, ಆಳುಕಾಳುಗಳು. ರೂಪಸಿಹೆಂಡತಿ ಮುದ್ದು ಮಕ್ಕಳುಎಲ್ಲವೂ ದೊರಕಿತ್ತು. ಬಹಳ ತೃಪ್ತಿ ದಾಯಕ ಬದುಕು ಎನ್ನಬಹುದು.
ದಾರಿಯಲ್ಲಿ ಟ್ರಾಫಿಕ್ ಜ್ಯಾಮ್ ಆಗಿ ವೆಹಿಕಲ್ ಗಳು ನಿಂತದ್ದು ಕಾಣಿಸಿ ಸೂರ್ಯ ಕೂಡ ತನ್ನ ಕಾರನ್ನು ನಿಲ್ಲಿಸಿದ.
ಹಾಗೆ ಮುಂದೆ ದೃಷ್ಟಿ ಹಾಯಿಸಿದಾಗ ಎದುರುಗಡೆ ದಾರಿ ಬದಿಯಲ್ಲಿ ಇದ್ದ ಗವರ್ನಮೆಂಟ್ ಹಾಸ್ಪಿಟಲ್ ಕಾಣಿಸಿತು. ಅದರ ಎದುರುಗಡೆ ಜನ ಜಮಾಯಿಸಿ ವೆಹಿಕಲ್ ಗಳು
ಮುಂದೆ ಹೋಗಲಾಗದೆ ಇರುವುದು ಅವನರಿವಿಗೆ ಬಂತು.ಕಾರಿನ ಗ್ಲಾಸ್ ಇಳಿಸಿ ಅಲ್ಲೇ ಹೊರಗೆ ನಿಂತಿದ್ದ ವ್ಯಕ್ತಿ ಯಲ್ಲಿ ಏನು ವಿಷಯ ಎಂದು ವಿಚಾರಿಸಿದ.
" ಅಯ್ಯೋ ಯಾವುದೋ ಸೂಸೈಡ್ ಕೇಸ್ ಸಾರ್. ಆಯಪ್ಪಾ ..ಭಾರೀ ಶ್ರೀಮಂತ ಅಂತೆ ಆದರೆ ದುಶ್ಚಟಗಳ ದಾಸನಾಗಿ ಸಾಲಮಾಡಿ ಸಾಲಗಾರರ ಭಾದೆ ತಾಳಲಾಗದೆ ನೇಣು ಹಾಕಿಕೊಂಡನಂತೆ.
ಅವನ ಹೆಣವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಬೇಕಾದರೆ ಅವನ ಚಿಕಿತ್ಸೆ ಯ ದುಡ್ಡು ಕಟ್ಟಬೇಕು ಎಂದು ಆಸ್ಪತ್ರೆ ಯವರು ಹಟ ಹಿಡಿದಿದ್ದಾರೆ. ಪಾಪ ಅವನಹೆಂಡತಿ ಹತ್ತಿರ ದುಡ್ಡು ಇಲ್ಲವಂತೆ ಅದಕ್ಕೆ ಗಲಾಟೆ ಮಾಡುತ್ತಿದ್ದಾಳೆ." ಎಂದ ಆ ವ್ಯಕ್ತಿಯ ಮಾತು ಕೇಳಿ ಸೂರ್ಯನಿಗೆ ಅಯ್ಯೋ ಪಾಪ ಅನಿಸಿತು.
ಕಾರಿನಿಂದ ಕೆಳಗಿಳಿದ ಸೂರ್ಯ ಜನರನ್ನು ಪಕ್ಕಕ್ಕೆ ಸರಿಸುತ್ತಾ ಮುಂದೆ ನಡೆದ. ಅಲ್ಲಿ ದಾರಿಯಲ್ಲಿ ಮುಖ ಮುಚ್ಚಿ ರೋಧಿಸುವ ಹೆಂಗಸನ್ನು ಕಂಡುಮನಮರುಗಿತು.
ಜೇಬಿನಲ್ಲಿದ್ದ ನೋಟಿನಕಂತೆಯನ್ನು ತೆಗೆಯಲು ಅವನ ಕೈಯನ್ನು ಪಾಕೆಟ್ ಒಳಗಡೆ ಹಾಕಿದ ಸೂರ್ಯ.
ಅಷ್ಟರಲ್ಲಿ ರೋಧಿಸುತ್ತಿದ್ದ ಆ ಹೆಂಗಸು ಮುಖದಿಂದಕೈತೆಗೆದಕಾರಣ ಅವಳ ಮುಖ ಸೂರ್ಯನ ಕಣ್ಣಿಗೆ ಬಿತ್ತು. ಅದು ನಕ್ಷತ್ರ!!!!
'ಯಾರು ತಪ್ಪು ಮಾಡುತ್ತಾರೋ ಅವರು ಅದಕ್ಕೆ ತಕ್ಕುದಾದ ಶಿಕ್ಷೆಯನ್ನು ಇದೇ ಜನುಮದಲ್ಲಿ ಇಲ್ಲೇ ಅನುಭವಿಸಬೇಕು ಎಂದು ಎಲ್ಲೋ ಓದಿದ ನೆನಪಾಯಿತು.'
'ಅಪಾತ್ರರಿಗೆ ದಾನಮಾಡುವುದು ತಪ್ಪು' ಸೂರ್ಯನ ಒಳಮನಸ್ಸು ಹೇಳುತ್ತಿದ್ದಂತೆ
ಅಂದು .'ಬಿ ಪ್ರಾಕ್ಟಿಕಲ್ '..ಅಂದ ನಕ್ಷತ್ರಳ ಹಿತವಚನ ನೆನಪುಮಾಡಿಕೊಂಡು ಸೂರ್ಯ ಕೈಯಲ್ಲಿದ್ದ ಹಣವನ್ನು ಅಲ್ಲೇದಾರಿ ಬದಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಹೆಂಗಸಿನ ತಟ್ಟೆ ಗೆ ಹಾಕಿ ಹಿಂದಿರುಗಿ ತನ್ನ ಕಾರಿನತ್ತ ಹೆಜ್ಜೆ ಹಾಕಿದ.....(ಮುಕ್ತಾಯ)