ಯಕ್ಷಲೋಕ
ಯಕ್ಷಲೋಕ
ಬಾಲ್ಯದಲ್ಲಿ ನೋಡಿ ನಿಬ್ಬೆರಗಾಗಿ
ಮನದಲ್ಲಿ ನಿಂತ ನೆನಪುಗಳ ಭೋಗಿ
ಕುಣಿದು ಕುಪ್ಪಳಿಸಿದ ರಂಗಮಂಟಪದ ಮಗ್ಗಿ
ಹೆಜ್ಜೆ ನೆಲಕ್ಕಪ್ಪಳಿಸಿ ಮೈಮನವೆಲ್ಲಾ ಒದ್ದೆಯಾಗಿ!!
ಕಣ್ಣು ತೆರೆಸಿತು ನಿಜವಾದ ಯಕ್ಷಲೋಕ
ಮೈಗೆ ಎಣ್ಣೆ ಮೆತ್ತಿದಂತೆ ಕನಸು ಕಂಡ ಕಂಸ ಸಖ
ಬೇರೆಲ್ಲಾ ಮರೆತು ಹೋಗಿ ನೋಡುತ್ತಾ ಯಕ್ಷಸುಖ
ನೋಡಿದ ಯಕ್ಷಗಾನದ ನೆನಪಿನ ಹಸಿ ಪುಳಕ!!
ಮೋಡಿ ಮಾಡುವುದು ಯಕ್ಷಗಾನದ ನಾಮ
ಹೆಸರಲ್ಲಿಯೇ ಪರಲೋಕಕ್ಕೆ ಒಯ್ಯುವ ಸಂಗಮ
ಯಕ್ಷವೊಂದು ಗಂಧರ್ವ ಕಿನ್ನರ ನಾಟ್ಯ ಸಂಗೀತ
ನಾಟಕದ ಅಭಿನಯನ್ನೊಳಗೊಂಡ ಭಲೇ ಭೂತ!!
ಕಥೆಗಳ ಮೋಹಕತೆಯ ವಿಭಿನ್ನ ಮಾಯೆ
ಭಾಗವತ ಸಂಗೀತ ತಾಳಮದ್ದಳೆ ಛಾಯೆ
ಗಿರಗಿರನೆ ತಿರುಗಿ ಸುತ್ತಿಸುವ ಕಣ್ಕತ್ತಲೆ
ದೇವರು ಬಂದಂತೆ ಕುಣಿದು ತೋರುವರು ಯಕ್ಷಮತ್ತಲೇ!!
✍️ ಪುಷ್ಪ ಪ್ರಸಾದ್ ಉಡುಪಿ
