STORYMIRROR

Lakumikanda Mukunda

Romance Fantasy

2  

Lakumikanda Mukunda

Romance Fantasy

ವಿಶಾಲನೆದೆಯ ಸುಧೆಯ ಸವಿಯಬಾರಾ..

ವಿಶಾಲನೆದೆಯ ಸುಧೆಯ ಸವಿಯಬಾರಾ..

1 min
123

ಒಲವಾಗಿ ಕೈ ಹಿಡಿದು ನೆನಪಾಗಿ ಉಳಿದವಳೆ..

ಚೆಲ್ವಾಗಿ ಮಾತಾಡಿ ಹೃದಯದಾಳಕ್ಕೆ ಇಳಿದವಳೆ..

ವಿಶಾಲನೆದೆಯ ಸುಧೆಯ ಸವಿದು ಕುಣಿದವಳೆ..

ಕುಶಾಲ ತೋಪು ಸಿಡಿದಾಗ ಸಂಭ್ರಮಿಸಿ ತಣಿದವಳೆ..

ಸುಖವಾಗಿರು ಎಲ್ಲಿದ್ದರೂ ಹೇಗಿದ್ದರೂ ಅನವರತ..!


ಮೂರು ದಿನದ ಬದುಕಿಗೆ ಸಾಸಿರ ಕನಸನಿಟ್ಟವಳೆ..

ಮೂರ್ಗಂಟು ಹಾಕಿಸಿ ಸಿಂಧೂರ ಪಡೆದ ಸೌಭಾಗ್ಯಳೆ..

ಎನೆಯಿಲ್ಲದ ಒಲವಲ್ಲಿ ಜೊತೆಗಿರುವ ಮಾತಾಡಿದವಳೆ

ಕೊನೆಗೆ ಮೌನದ ನೋವನಿಟ್ಟು ನನ್ನ ದೂರುವವಳೆ..

ಸುಖವಾಗಿರು ಎಲ್ಲಿದ್ದರೂ ಹೇಗಿದ್ದರೂ ನಗು ನಗುತ..


ಮರೆಯದ ಒಲವಿಗೆ ಮಾಸದ ಬರೆ ಎಳೆದವಳೆ..

ಎದೆಗಾಯಕೆ ತುಸು ಮುಲಾಮು ಬಳಿಯದೆ ನಿಂತವಳೆ..

ನಿನಗಾಗೆ ಕಾಯುವ ನೊಂದ ಜೀವವಿದು ಬಾ ಮರಳಿ..

ತಪ್ಪಿದ್ದರೆ ಮನ್ನಿಸು,ಕಟ್ಟುವ ನಮ್ಮದೆ ಪ್ರೇಮಸೌಧವ 

ಸುಖವಾಗಿರು ಎಲ್ಲಿದ್ದರೂ ಹೇಗಿದ್ದರೂ ನನ್ನೊಲವ ಹೂವಾಗಿ


ನಾ ನಿನ್ನ ಸ್ವತ್ತೆಂದು ಮುತ್ತಿನಾಮಳೆ ಸುರಿದವಳೆ

ಹೊನ್ನ ಬದುಕು ನಮ್ಮದೆಂದು ಹಾರೈಸಿ ಸರಿದವಳೆ..

ನಿನ್ನವನ ಕ್ಷೇಮ ತಿಳಿಯದಷ್ಟು ಕಾರ್ಯತತ್ಪರಳಾದವಳೆ

ಸನ್ನೆಯನರಿತು ತಬ್ಬಿ ಮುದ್ದಾಡಿದ ಗಳಿಗೆಗಳ ಮರೆತವಳೆ

ಸುಖವಾಗಿರು ಎಲ್ಲಿದ್ದರೂ ಹೇಗಿದ್ದರೂ ಕುಶಿಯಿಂದ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance