ವಾಟ್ಸಪ್ಪ್ ತಾಣ
ವಾಟ್ಸಪ್ಪ್ ತಾಣ
ಬರಹಕ್ಕೊಂದು ಗೌರವವಿರಲಿ
ಕಥೆ - ಕವಿತೆಗೊಂದು ಬೆಲೆ ಇರಲಿ
ಪ್ರಕಟಿಸುವಲ್ಲಿ ಎಚ್ಚರವಿರಲಿ
ಕೃತಿ ಚೋರರ ಪಾಲಗದಿರಲಿ!!
ಇಲ್ಲಿ ಎಲ್ಲರೂ ಸರಿ ಸಮಾನರು
ಅವರವರ ಅನಿಸಿಕೆಯಂತೆ ಬರೆಯುವರು
ತಪ್ಪಿದ್ದರೆ ತಿಳಿಸಿ ಹೇಳುವರು
ಸರಿ ಬರೆಯಲು ಪ್ರೋತ್ಸಾಹಿಸುವರು!!
ನಾವ್ಯಾರೋ ನೀವ್ಯಾರೋ ಗೊತ್ತಿಲ್ಲ
ಆದರೂ ಬೆಳೆಯುತ್ತಿದೆ ಗೆಳೆತನವಿಲ್ಲಿ
ಬಂದು ಹೋಗುವವರ ಮಧ್ಯೆ ಮಾತಿಲ್ಲ
ವಿಧ ವಿಧ ಬರಹಗಳದ್ದೆ ಧಬಾ೯ರಿಲ್ಲಿ!!
ಕವನ, ಲೇಖನ, ಕಥೆ ಒಂದಾ ಎರಡಾ
ಎಲ್ಲದರ ಸಮ್ಮೇಳನ ದಿನವೂ ನೋಡಾ
ಓದಿ ಲೈಕು, ಕಮೆಂಟು, ವಿಮರ್ಶೆ ಮಾಡಾ
ಆದರೆ ದಿನವೆಲ್ಲ ಇದರಲ್ಲೆ ಕಳೆಯ ಬೇಡಾ!!
ಇರುವುದು ಬಿಡುವುದು ಅವರವರ ಇಷ್ಟ
ಓದು ಬರಹಕಿಲ್ಲಿ ಯಾವ ಬರವಿಲ್ಲ
ಬೇಕಾದ್ದು ತಿಳಿದುಕೊ, ಬೇಡಾದ್ದು ಬಿಟ್ಟಾಕು
ನೋಡಿ ಓದದಿದ್ದರೂ ತೊಂದರೆಯಿಲ್ಲ!!
ಸಾಹಿತ್ಯ ಜಗತ್ತಿಗೊಂದು ತಾಣ
ನಿನ್ನ ನೀ ಅರಿತುಕೊ ಕ್ರಮೇಣ
ಬುದ್ಧಿಯ ಮರೆಮಾಚಿ ಕೂರದಿರು
ಚಿತ್ತದ ಚಂಚಲತೆ ಇಲ್ಲಿ ತರದಿರು!!
ಇದೊಂದು ಸಾಹಿತ್ಯದ ಜಾಲ
ಒಮ್ಮೆ ಸಿಕ್ಕಿ ಹಾಕಿಕೊಂಡರಿಲ್ಲಿ
ಆಕ್ಟೋಪಸ್ ಹಿಡಿತಕಿಂತ ಗಟ್ಟಿ
ಗೊತ್ತಾಗದು ದಿನದೂಡುವ ಸಮಯ!!
