STORYMIRROR

Jyothi Baliga

Inspirational Others

4  

Jyothi Baliga

Inspirational Others

ಉಳಿವು

ಉಳಿವು

1 min
22.7K

ಕಾರ್ಖಾನೆಯು ವಿಷಾನಿಲವ ಉಗುಳುತಿಹುದು 

ಪರಿಸರವ ನಾಶ ಮಾಡಲು‌ ಹೊಂಚು‌ ಹಾಕುತಿಹುದು


ವಿಷಪೂರಿತ ರಾಸಾಯನಿಕ ತುಂಬಿದ ನೀರನ್ನು

ಜೀವಜಲಕೆ ಬಿಡುತಿಹರು

ಪ್ರಾಣಿ-ಪಕ್ಷಿ ಸಂಕುಲದ ಜೊತೆಯಲ್ಲಿ

ಜಲಚರಗಳು ವಿನಾಶದಂಚಿನಲಿರುವುವು


ಶ್ರೀಮಂತ ರಾಷ್ಟವೆಂದು ತೋರ್ಪಡಿಸಿಕೊಳ್ಳಲು 

ಪ್ರಕೃತಿ ಮಾತೆಯ ಇಂಚು ಇಂಚಾಗಿ ಕೊಲ್ಲುತಿಹರು

ಸಹನಾಮೂರ್ತಿ, ಕ್ಷಮಯಾಧರಿತ್ರಿ ಭೂಮಿ ತಾಯಿಯ ಸಹನೆಯನ್ನು ಪರೀಕ್ಷಿಸುತಿಹರು


ವಸುಂಧರೆ ತಾಳ್ಮೆ ಕಳೆದುಕೊಂಡು ಅಸಹನೆ ತೋರುತಿಹಳು

ಓಜೋನ್ ಪದರವನ್ನು ನಾಶಪಡಿಸಿದ ತಪ್ಪಿಗೆ 

ಶಾಖವ ಹೆಚ್ಚಿಸುತಿಹಳು


ಮಾಲಿನ್ಯಗಳ ಸಂತೆಯಾಗಿರುವ ಜೀವಸಂಕುಲವನ್ನು ರಕ್ಷಿಸಲು ಭೂತಾಯಿ ಪಣ ತೊಟ್ಟಿಹಳು 

ಸುನಾಮಿ, ಜ್ವಾಲಾಮುಖಿ, ಸುಂಟರಗಾಳಿಯೆಂದು

ಆಗಾಗ್ಗೆ ತನ್ನ ಚಾಟಿ ಬೀಸುತಿಹಳು


ಮಾಲಿನ್ಯವನ್ನು ಹತೋಟಿಗೆ ತರದಿದ್ದರೆ ವಿನಾಶ ಸಂಭವಿಸುವುದು ಖಚಿತ ಎನ್ನುತ್ತಿಹಳು

ಇದನರಿತು ಪ್ರಕೃತಿಯ ಸಂರಕ್ಷಿಸಿದರೆ‌ ಮನುಕುಲದ ಉಳಿವು ನಿಶ್ಚಿತವೆಂದು ನಗುಬೀರುತಿಹಳು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational