STORYMIRROR

ಶಿವಲೀಲಾ ಹುಣಸಗಿ

Inspirational

3  

ಶಿವಲೀಲಾ ಹುಣಸಗಿ

Inspirational

ಥಾಂಕ್ಯೂ

ಥಾಂಕ್ಯೂ

1 min
148

ಅರಿವು ಮೂಡಿದಂತೆ ಬೆಳಗು

ನಸುನಗೆಯಂತೆ ‌ಹೂಗೊಂಚಲು

ಅಕ್ಷರಗಳ ಮೋಡಿಯಲಿ ನಲಿವು

ಬರೆದಷ್ಟು,ಮೊಗೆದಷ್ಟು ಸಿಗದು

ಶಿಕ್ಷಣದ ಹೊಸ ಬಳಕು ಕಂಗಳಲಿ

ಅರಿವೇ ಗುರುವೆಂಬ ಮಂತ್ರವ

ಸಾರಿದವನಿಗೆ ವೇದಗಳ ಕೊಡುಗೆ

ಜ್ಞಾನದ ಸಾಗರದಿ ತೇಲುವ ಹಂಸ

ಮಸ್ತಕದ ಪುಸ್ತಕದಲಿ ನಿನ್ನ ಬಿಂಬ

ಶಾರದೆಯ ವೀಣೆಯಲಿ ನಿನ್ನ ನಾಮ

ಗುರು ಗೋವಿಂದನ ಪಾದಕೆರಗಿ

ಬೇಡುವೆ ಅನುದಿನವು ನಿಮ್ಮ

ಅರಿವೇ ಗುರುವೆಂಬ ಪಾಠವು

ಜೊತೆಯಲ್ಲಿ ಜೇನಿನೂಟವು...



Rate this content
Log in

Similar kannada poem from Inspirational