ಸ್ವರ್ಗ ಎಲ್ಲಿದೆ
ಸ್ವರ್ಗ ಎಲ್ಲಿದೆ
ಎಲ್ಲಿದೆ ಸ್ವರ್ಗ ಎಲ್ಲಿದೆ ನರಕ
ಇಲ್ಲಿದೆ ಸ್ವರ್ಗ ಇಲ್ಲಿದೆ ನರಕ
ನಗುವಲ್ಲವೇ ಸ್ವರ್ಗ ಅಳುವಲ್ಲವೇ ನರಕ
ಅಳುವುದು ನಗುವುದು ಜೀವನದ ಕಾಯಕ
ನಕ್ಕಾಗ ಮನಸಾರೆ ನಗುವುದ ಕಲಿ
ಅತ್ತಾಗ ಮನಸಾರೆ ಅಳುವುದ ತಿಳಿ
ಸುಖದಲ್ಲಿರುವಾಗ ಎಲ್ಲರೂ ನಮ್ಮ ಬಳಿ
ದುಃಖದಲ್ಲಿರುವಾಗ ಅವರು ಇರುವ ತಿಳಿ??
ಬಾಳ ಪಯಣದಲ್ಲಿ ಎಲ್ಲವೂ ಆಕಸ್ಮಿಕ
ಅದ ನೀ ತಿಳಿಬೇಕು ನಾಯಕ
ಎಲ್ಲವ ಮೆಟ್ಟಿ ನಿಲ್ಲು ನಿಂತರೆ ನೀನು
ಸುಖವು ನಿನ್ನ ಮುಂದೆ ಇದೆ ತಿಳಿಯೇನು
