ಸ್ತ್ರೀ
ಸ್ತ್ರೀ


ಏನೆಂದು ಬರೆಯಲಿ ನಾನು
ಹಣೆ ಬರಹ ಬರೆಯಲು ನಾನೇನು ಬ್ರಹ್ಮನಲ್ಲ
ಏನೆಂದು ಹೇಳಲಿ ನಾನು
ಭವಿಷ್ಯದ ಬಗ್ಗೆ ಹೇಳಲು ನಾನೇನು ಜ್ಯೋತಿಷಿಯಲ್ಲ
ಏನೆಂದು ಹಾಡಲಿ ನಾನು
ಸುಮಧುರವಾಗಿ ಹಾಡಲು ನಾನೇನು ಗಾನಕೋಗಿಲೆಯಲ್ಲ
ಏನೆಂದು ಹೇಳಲಿ ನಾನು
ಬೇಕಾದಂತೆ ಬೇಕಾದಾಗ ಮುಖಕ್ಕೆ ಬಣ್ಣ ಬಳಿದು ನಾಟಕವಾಡಲು ಸಿನೆಮಾ ನಂಟು ನನಗಿಲ್ಲ
ಏನೆಂದು ಹೇಳಲಿ ನಾನು
ಭರವಸೆಯ ಕೊಟ್ಟು, ಅದರಂತೆ ನಡೆಯದಿರಲು ರಾಜಕಾರಣಿಯೂ ನಾನಲ್ಲ
ನಾನಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುವೆ,ಆದರೂ ನಟಿಸುವವಳು ನಾನಲ್ಲಾ
ನಿಜದ ಪಾತ್ರವು ನನ್ನದು,ಕಾಲಕ್ಕೆ ತಕ್ಕಂತೆ ಬದಲಾಗುತಿರುವೆನು
ನಾನ್ಯಾರೆಂದು ಬಲ್ಲಿರಾ!?
ಮಗಳಾಗಿ ಮನೆಯವರ ಮನದಲಿ ನಗು ತುಂಬಿದವಳು
ಮಡದಿಯಾಗಿ ಬಾಳನೌಕೆಗೆ ಹೆಗಲುಕೊಟ್ಟವಳು
ಮಾತೆಯಾಗಿ ತ್ಯಾಗದ ಪ್ರತೀಕವಾದವಳು
ನಾನು... " ಸ್ತ್ರೀ"