ಸ್ತ್ರೀ ಸ್ವಾತಂತ್ರ್ಯ.
ಸ್ತ್ರೀ ಸ್ವಾತಂತ್ರ್ಯ.
ಸ್ತ್ರೀ ಸ್ವಾತಂತ್ರ್ಯ ಎಂದೂ ಇರಬೇಕು,
ಎಂದೆಂದಿಗೂ ಕಟ್ಟಬೇಡಿ ಅವಳ ಕೈ,
ನೋಡಬೇಡಿ ಅವಳನ್ನು ಕೆಳ ದರ್ಜೆಯಲ್ಲಿ,
ಮಾಡಬೇಡಿ ಅವಳನ್ನು ಉಸಿರಾಡದಂತೆ,
ಅರಳಲಿ ಅವಳ ಬದುಕು ಹೂವಿನಂತೆ.
ಪುರುಷರಂತೆ ಅವಳು ಓದಬೇಕು ಓಡಾಡಬೇಕು,
ಸಂಸಾರಕ್ಕೆ ಹೆಗಲುಕೊಟ್ಟು ನಿಭಾಯಿಸಬೇಕು,
ಮಾಡಬೇಕು ಮಕ್ಕಳನ್ನು ಸಂಸ್ಕಾರವಂತರನ್ನಾಗಿ,
ಇದೆಲ್ಲಾ ಸುಸೂತ್ರವಾಗಿ ಸಾಗಲು ಜೀವನದಲ್ಲಿ,
ಇರಬೇಕು ಅವಳು ಎಂದೂ ಸ್ವತಂತ್ರವಾಗಿ.
ಪ್ರತಿ ಹೆಣ್ಣಿಗೆ ಬೇಕು ಪ್ರೀತಿ ಗೌರವ ಕಾಳಜಿ,
ಸಮಾನತೆ ಎಂಬುದಕ್ಕೆ ಇಲ್ಲ ಅರ್ಥ ಪ್ರಕೃತಿಯಲ್ಲಿ,
ನಿಸರ್ಗದೊಳಗೆ ಒಂದೊಂದು ಸೃಷ್ಠಿಯೂ ಭಿನ್ನ,
ಆದರೆ ಪ್ರತಿ ಸೃಷ್ಠಿಯು ಪೂರಕ ಪರಸ್ಪರರಲ್ಲಿ,
ಇದನ್ನು ಅರಿಯಬೇಕು ಪುರುಷಪ್ರಧಾನ ವ್ಯವಸ್ಥೆಯಲ್ಲಿ.
ಸ್ವಾತಂತ್ರ್ಯವು ಸಂಪೂರ್ಣವಾಗಿ ಎಲ್ಲಿಯೂ ಇಲ್ಲ,
ಎಲ್ಲರೂ ಬದುಕಬೇಕು ಕಟ್ಟುಪಾಡಿನ ಚೌಕಟ್ಟಿನಲ್ಲಿ,
ಸ್ವಾತಂತ್ರ್ಯ ಆಗದಿರಲಿ ಎಂದೂ ಸ್ವೇಚ್ಛಾಚಾರ,
ಸಹಮತದಲ್ಲಿ ಬಾಳಬೇಕು ಬೇಕು ಪರಸ್ಪರ,
ಅದರಿಂದಲೇ ನಮ್ಮ ಬದುಕಾಗುವುದು ಎತ್ತರ.
ಧನ್ಯವಾದಗಳು.
