STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

3  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಶರಷಟ್ಪದಿಯಲ್ಲಿ ರಾಮನ ವರ್ಣನೆ

ಶರಷಟ್ಪದಿಯಲ್ಲಿ ರಾಮನ ವರ್ಣನೆ

1 min
153

ರಾಮನ‌ವರ್ಣನೆ

ಶರಷಟ್ಪದಿಯಲ್ಲಿ


ಅಖಿಲಸುಗುಣಖಣಿ

ದಶರಥ ನಂದನ

ರಾಮನು ಅವತರಿಸಿದ ದಿನವೇ

ನವಮಿಯ ಶುಭದಿನ

ಸೀತೆಯ ವಲ್ಲಭ

ಪ್ರಜೆಗಳ ಪರಿಪಾಲಿಸಿದ ಪ್ರಭುವೇ


ಮಾತೆಯ ಮಾತನು

ಪಾಲಿಸಿ ಹೋರಟೆ

ಕಾಡಲಿ ಅಹಲೆಯ‌‌ ಸಲುಹಿದೇ

ಅಸುರನ ವಧಿಸಿದೆ

ನಿನ್ನೆಯ ಮಹಿಮೆಯ

ಜಗದಲಿ ಸಾರುತ ಹೋರಟೇ


ರಘುಕುಲ ತಿಲಕನೆ

ಹನುಮನ ಪ್ರಿಯನೆ

ರಾವಣ ಕೊಂದವ ರಾಮನೇ

 ನಾಮವ ಜಪಿಸಲು 

ಸಾಧನ ದೇಹಕೆ

 ಸವಿಯನು ನೀಡುತ‌ ತಣಿಸುತಲೀ


ಪ್ರಿಯಳ ಕೃಷ್ಣನ  

ನೆನೆಯುತ ಭಜಿಸುವೆ

ಪಾಲಿಪ ನಮ್ಮನು ಪ್ರಭುವೇ

ನಿನ್ನಯ ಕರುಣೆಯ

ಇಹಪರ ಜಗದಲಿ

ಮುಕುತಿಯ ನೀಡುವ ದೊರೆಯೇ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational