ಶಿಕ್ಷಣ
ಶಿಕ್ಷಣ
ಲೋಕದ ಜ್ಞಾನ ಅರಿಯಲು ಬೇಕು ಸಾಮಾನ್ಯ ಜ್ಞಾನ
ಮಾತೆ ತಿಳಿಸುತ್ತದೆ ನಿನ್ನ ಸ್ಥಾನ
ಸಣ್ಣ ಸಣ್ಣ ವಿಷಯಕ್ಕೂ ನೋವು ಬೇಡ ಅಳುಕಬೇಡ ನೀನ
ಅವಮಾನ ಮೆಟ್ಟಿ ನಿಂತರೆ ಮುಂದಿದೆ ನಿನಗೆ ಸನ್ಮಾನ
ಏನು ಗೊತ್ತಿಲ್ಲ ಎಂದು ಕೈಕಟ್ಟಿ ಕೊಳ್ಳಬೇಡ
ಎಲ್ಲವೂ ನಾನು ನನ್ನಿಂದಲೇ ಎಂದು ಉಹಿಸಬೇಡ
ಹಸಿವು ಎಂದು ಬಂದವರಿಗೆ ಊಟ ಹಾಕು
ಅತಿಥಿಗಳು ಮನೆಗೆ ಬಂದರೆ ಆಡುವ ನಾಲ್ಕು ಮಾತು ಸಾಕು
ಜೀವನ ಹಾದಿಯು ಸುಗಮವಲ್ಲ ತಿಳಿ
ಬರುವ ಕಷ್ಟನಷ್ಟಗಳನ್ನು ಎದುರಿಸಲು ಇರಲಿ ಧೈರ್ಯ ಬಳಿ
ಏನೇ ನೋವು ನಲಿವು ಬದುಕಿನಲ್ಲಿ ಬರಲಿ
ಅದೇ ನಿಭಾಯಿಸುವ ಶಕ್ತಿ-ಯುಕ್ತಿ ನಿನ್ನೊಳಗೆ ಸದಾ ಇರಲಿ
