ಶೀರ್ಷಿಕೆ:- ರುದ್ರದೇವರ ವರ್ಣನೆ
ಶೀರ್ಷಿಕೆ:- ರುದ್ರದೇವರ ವರ್ಣನೆ
ರುದ್ರ ದೇವರ ವರ್ಣನೆ
ಹಿಮಗಿರಿ ವಾಸನೇ , ತ್ರಿನೇತ್ರ ನಯನನೇ
ಉಮಾ ಮನೋಹರ ನಮೋ ನಮೋ
/ಪ/
ಗಜಾಸುರನ ಕೊಂದು ಗಜಚರ್ಮವ ಧರಿಸಿದ ಗಜಚರ್ಮಾಂಬರ ನೀನೇ
ಹುಲಿಯ ವೇಷದಿ ದೈತ್ಯನ ಕೊಂದು
ಹುಲಿ ಚರ್ಮ ಧರಿಸಿದ ಕೃತ್ತಿವಾಸನು ನೀನೆ
ರಭಸದಿ ಬಂದ ಗಂಗೇಯ ಧರಿಸಿದ ಶಿರದಲಿ ಗಂಗಾಧರನು ನೀನೇ
ಲಯ ಕಾಲದಿ ಭಯಂಕರ ನಾಟ್ಯವ
ಮಾಡುವ ಅಭಯಂಕರನು ನೀನೇ
ಅಂಬುದಿಯಲಿ ಹತ್ತು ಕಲ್ಪದಿ ತಪಸ್ಸವ ಮಾಡಿ ಶೇಷ ಪದವಿ ಪಡೆದವ ನೀನೆ
ಕೊರೊಳೊಳು ಗರಳದಂತ ಧರಿದವನು
ಗರಳವ ಕುಡಿದು ಗರಳಕಂಧರನು ನೀನೆ
ಮನಸ್ಸಿನ ಅಭಿಮಾನಿ ದೇವತೆಯಾದ ಮನೋನಿಮಾಯಕ ರುದ್ರನು ನೀನೇ
ಅನುದಿನದಲಿ ಸುಮನಸನು ಕರುಣಿಸು
"ಪ್ರಿಯಕೃಷ್ಣ" ನಿನಗೆ ನಮೋ ನಮೋ
