STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಶೀರ್ಷಿಕೆ :- ರಾಮ ಎಂಬರೆಡಕ್ಷರ

ಶೀರ್ಷಿಕೆ :- ರಾಮ ಎಂಬರೆಡಕ್ಷರ

1 min
83

ರಾಮ ಎನ್ನಲು ಎನೋ ಹರುಷವೂ ನಿನ್ನ ನಾಮ

ಅನುಭವಿಸುವನೋ ಸುಖಧಾತನು /ಪ/

"ರಾ"ಗ ದ್ವೇಷ ರಹಿತ ಮಂಗಳದಾಯಕನು

"ಮ"ಮಾತೆ ಸ್ವರೂಪ ಆಶ್ರಯದಾತನು

ರಾಮ ರಾಮ ಪಾಡಿ ಪೊಗಳಲು ಮಹಿದಾತನು

ರಾಮಾ ಮಹಾಮಹಿಮನ ಆದರ್ಶಗಳ

ನ್ಯಾಯವಂತ ಜನಪ ನ್ಯಾಯನೀತಿಗಳ

ಜಗವ್ಯಾಪಿ ನೀನು ಸಕಲ ಸದ್ಗುಣಗಳ

ಮಾನವನಾಗಿ ಹುಟ್ಟಿ ಕಷ್ಟಗಳ ಅನುಭವಿಸಿದೆ

ನಿಮ್ಮ ಬಿಟ್ಟು ನಾನೀಲ್ಲ ಎಂದು ಸಾರಿದೆ

ನಾಮಬಲದಲಿ ಜಯವಿದೆ ಎಂದು ತಿಳಿಸಿದೆ

ನೂರಾರು ವರುಷ ಹೋರಾಟದ ಫಲ

ರಾಮಭಕ್ತರು ಹೋರಾಡಿದ ಛಲ

ಅದುವೇ ಅಯೋದ್ಯ ರಾಮಜನ್ಮಸ್ಥಳ

ಸಡಗರ ವೈಭವ ಆನಂದಿಸುವ ಮನ

ಇಂದು ಶಿಲಾನ್ಯಾಸ ನೇರೆವೆರುವ ದಿನ

ಜನಮಾನಸದಲಿ ಉಳಿಯುವ ಸುದಿನ

ಪುಟದಿ ಬರೆದಿಡುವ ಸುವರ್ಣಕ್ಷಾರಗಳು

ಪುಣ್ಯ ಶರೀರದ ಸಂಭ್ರಮಿಸುವ ಈ ಚಕ್ಷುಗಳು

ಮರೆಯಲಾರದ ಪ್ರಿಯಕೃಷ್ಣನ ಕ್ಷಣಗಳು

            ಜೈ_ಶ್ರೀರಾಮ


Rate this content
Log in

Similar kannada poem from Inspirational