ಶೀರ್ಷಿಕೆ:- ಆದಿಯುಗಾದಿ
ಶೀರ್ಷಿಕೆ:- ಆದಿಯುಗಾದಿ
ಯುಗದ ಆದಿ ಯುಗಾದಿ ಬಂತು ನಾಡಿಗೆ
ಶುಕ್ಲ ಪ್ರತಿಪದೆಯಲ್ಲಿ ಆಚರಿಸುವ ಕಾಲ ಗೆಳತಿ
ವಸಂತ ಋತುವಿನ ಸೊಬಗಿನ ರಮ್ಯ ಚೈತ್ರ ಕಾಲ
ಅಭ್ಯಂಜನಗೈದಯ ದೇವರ ಪೂಜಿಸುವ ಕಾಲ ಗೆಳತಿ
ಬೇವುಬೆಲ್ಲ ಮಿಶ್ರಣ ನೈವೇದ್ಯವ ಮಾಡಿ
ಜೀವನ ಕಹಿಸಿಹಿಗಳ ತಾತ್ಪರ್ಯ ತಿಳಿಯುವ ಕಾಲ
ಭೂತಾಯಿ ಹಸಿರು ಉಡುಗೆಯಲ್ಲಿ ಬರುವಳು
ಆಕಾಶರಾಜ ತ ಮಂದಾನಿಲ ಜೊತೆ ಬೆರೆಯುವ ಕಾಲ ಗೆಳತಿ
