STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ರಂಗಿನಾಟ

ರಂಗಿನಾಟ

1 min
405

ಈ ದೇವಭೂಮಿಯಲಿ

ಬಣ್ಣ ಬಣ್ಣದ ಚಿತ್ತಾರಗಳು

ವಿಶ್ವಕರ್ಮನ ಶಿಲ್ಪಗಳು

ಸಪ್ತ ವರ್ಣಗಳ ಮಿಶ್ರಣವು

ಹಚ್ಚು ಹಸುರಿನ ಕಾನನಗಳು

ಕೆಂಪು ವರ್ಣದ ಧರಣಿಯು

ಹೊಂಬಣ್ಣದ ಬಾಲಸೂರ್ಯ

ಶ್ವೇತವರ್ಣದ ಚಂದ್ರಮ

ನೀಲಿಯ ಆಕಾಶ ಭಿತ್ತಿಯಲಿ

ನೇರಳೆ ಕಿತ್ತಳೆ ನೀಲಿ ಹಸಿರು

ಹಳದಿ ಸಪ್ತ ವರ್ಣದ ಓಕುಳಿ

ಪ್ರಕೃತಿಯೊಳಗಿನ ಬಣ್ಣ ಬಣ್ಣ

ಚಿತ್ರ ಕಾರರ ಮನದ ಸ್ಫೂರ್ತಿ

ಬಿಳಿ ಕಪ್ಪು ವರ್ಣದೊಳಗೆ

ಹಲವು ವರ್ಣಗಳ ಮಿಶ್ರಣವು

ಬದುಕೊಂದು ವರ್ಣಮಯ

ಹಲವು ಭಾವನೆಗಳ ಸಂಕೇತ

ಶುದ್ಧತೆಗೆ ಬಿಳಿ ಕಷ್ಟ ಕ್ಕೆ ಕಪ್ಪು

ಸಮೃದ್ಧಿಗೆ ಹಸಿರು ಬುದ್ಧಿಗೆ ನೀಲಿ

ಹಳದಿ ಕೆಂಪು ಶುಭಸೂಚಕ

ಮನುಜನ ಸಂತಸ ಉತ್ಸಾಹ

ಉಕ್ಕುಕ್ಕಿ ಹರಿಯಲು ಬೇಕು

ಬಣ್ಣ ಬಣ್ಣದ ರಂಗಿನಾಟಗಳು



Rate this content
Log in

Similar kannada poem from Abstract