ರಕ್ಷಕ
ರಕ್ಷಕ
ಬಿಸಿಲು ಮಳೆಗಂಜದೆ
ಹಗಲಿರುಳು ದುಡಿದು
ಬೆವರ ಹನಿ ಲೆಕ್ಕವಿಡದ
ಮನೆ ರಕ್ಷಕ *ನನ್ನ ಅಪ್ಪ*
ಅಮ್ಮ ಭೂಮಿ ಅಪ್ಪ ನಭ
ದೃಢ ಚಿತ್ತದ ಪ್ರತ್ಯಕ್ಷ ದೈವ
ನಡೆ ನುಡಿ ಕಲಿಸಿದ ಶಿಕ್ಷಕ
ನಾಡಿನ ಅನ್ನದಾತ *ನನ್ನ ಅಪ್ಪ*
ಹೆಗಲ ಮೇಲೇರಿಸಿ ಕುಣಿಸಿ
ಕುದುರೆಯಾಗಿ ತಾನೆನ್ನ ನಲಿಸಿ
ನೋವು ನುಂಗುತ ಮೌನದಲಿ
ನಗುವ ವಿಷ ಕಂಠ *ನನ್ನ ಅಪ್ಪ*
ಹುಟ್ಟು ಹಾಕುತ ಸಂಸಾರ ನೌಕೆಯನು
ದಡ ಸೇರಿಸುವ ಅಂಜದ ನಾವಿಕನು
ಸವೆಸುತ ಶ್ರೀಗಂಧದಂತೆ ತನ್ನನು
ಸಲಹುವನು ಸತಿಸುತರ *ನನ್ನ ಅಪ್ಪ*
