ರಕ್ಷಾಬಂಧನ
ರಕ್ಷಾಬಂಧನ
ಸದಾ ಪ್ರೀತಿಪ್ರೇಮದಿ ನನ್ನನ್ನು ಹಾರೈಸುವನು,
ಭರವಸೆಯ ಬೆಳಕಚೆಲ್ಲುವ ಆಶಾಕಿರಣನಿವನು,
ತನ್ನ ಜೀವವನು ಒತ್ತೆಯಿಟ್ಟು ನನ್ನ ರಕ್ಷಿಸುವನು,
ನನಗಾಗಿ ಧರೆಗಿಳಿದ ಅನನ್ಯ ದೇವನಿವನು!!
ದುಗುಡಗಳ ಇರುಳನು ಸರಿಸುವ ಚಂದಿರ,
ನನ್ನ ಬಾಳಜ್ಯೋತಿಯನು ಬೆಳಗುವ ಭಾಸ್ಕರ,
ನನ್ನ ಭಾವನೆಗಳಿಗೆ ಸ್ಪಂದಿಸುವ ಅನನ್ಯ ಜತೆಗಾರ,
ನನಗಾಗಿ ಸ್ಪುರಿಸುವ ಅವನ ಪ್ರೀತಿ ಮಧುರ ಅಮರ!!
