STORYMIRROR

Mouna M

Tragedy Classics Others

4  

Mouna M

Tragedy Classics Others

ಪ್ರೀತಿಯ ಪ್ರಿಯ

ಪ್ರೀತಿಯ ಪ್ರಿಯ

1 min
298


ನೀವಿಲ್ಲದೆ ನಿಮ್ಮ ಕುಟೀರವು ಅನಾಥ 

ನೋಡಲೊಲ್ಲದು ಮನ ಆ ನಿಮ್ಮ ಕುಟೀರವ !!

ನಿಮ್ಮ ಒಡನಾಟದ ಬೇಷರತ್ ಪ್ರೀತಿಸುವ ಆ ಪರಿಯ .... 

ಏನೆಂದು ಬಣ್ಣಿಸಲಿ ನಾ, ಪದಗಳೇ ಸಾಲದು ಪ್ರಿಯ!! 


ಮೇಲು ಕೀಳೆನ್ನದೆ, ಹಿರಿ ಕಿರಿಯರೆನ್ನದೆ 

ಎಲ್ಲರಾ ಹೃದಯದಲ್ಲಿ ಮನೆಮಾಡಿದ ನೀವು ಇನ್ನು ಬರೀ ನೆನಪು,

ಸಾವಿನಲ್ಲಿ ಯಾರಿಗೂ ತಿಳಿಸದೇ ಹೋದ ನಿಮ್ಮ ಆ ಹುರುಪು 

ಮರೆಯಲಾರೆವು ನಾವ್ ಎಂದೂ ನಿಮ್ಮ ಕಣ್ಣಿನ ಹೊಳಪು !!


ನಿನ್ನ ಮೇಲೆ ನಂಬಿಕೆಯೇ ಬರದು ಓ ದೇವರೇ, 

ಪ್ರಿಯರ ಆತ್ಮಕ್ಕೆ ಶಾಂತಿಯನ್ನು ಕೊಡುವುದೇ ಆದರೆ.. 

ಕೇಳು ನೀ ನಮ್ಮೆಲ್ಲರ ಕಳಕಳಿಯ ಹರಕೆ 

ಪ್ರಿಯರ ಕುಟುಂಬವನ್ನು ಸಂರಕ್ಷಿಸು ದೇವರೇ ..... 

ನಿನ್ನೆಲ್ಲ ಕೆಲಸವನ್ನು ಬದಿಗಿಟ್ಟು ಪೊರೈಸುವೆಯಾ ಈ ನಮ್ಮ ಕೋರಿಕೆ!!! 

ಆಗಲೀ ನಾವ್ ಬರುವೆವು ನಿನ್ನ ದ್ವಾರಕೆ!!! 



Rate this content
Log in

Similar kannada poem from Tragedy