ಪ್ರೀತಿ ಪ್ರೇಮ
ಪ್ರೀತಿ ಪ್ರೇಮ
ನಿನ್ನ ಸಹವಾಸದಿಂದಲೇ
ನನ್ನ ಪ್ರೀತಿಗೊಂದು ಸಿಕ್ಕ ಮೆರಗು
ನಿನ್ನ ಅಂದವು ಕೆನ್ನೆ ಮೇಲೆ
ಕೈಯನಿಟ್ಟು ನೋಡುವಂತಹ ಬೆರಗು!!
ನಿನ್ನಿಂದಲೇ ತಾನೇ ಪೃಥ್ವಿಯ
ಮೇಲೆ ಪ್ರೀತಿಯ ಇರುವು
ಕಾಯುತಿದೆ ತುದಿಗಾಲಲಿ
ಈ ಹೃದಯ ನಿನ್ನಯ ಬರುವು!!
ಬೇಕಾಗಿದೆ ನನಗೆ ಪ್ರೀತಿಯ ಗೆಲ್ಲಲು
ನಿನ್ನಯ ತುಸು ಸಲೀಸು
ಭರವಸೆಯಿಂದ ಕೊಂಚ ಬಂದು
ಜೀವನದ ದಾರಿಯಲಿ ಚಲಿಸು!!
ನಿನ್ನದೊಂದು ನೋಟದಿ ತುಂಬಿದೆ
ಪ್ರೀತಿ ಪ್ರೇಮದ ಜ್ವರವು
ಮಾಡು ಬಾ ನೀ ಬಂದು
ಹೃದಯ ವೇದನೆಯ ತೆರವು!!
ಕಾಯುತಿದೆ ನಿನ್ನ ಕೊರಳ ಬಯಸಿ
ನಾ ಪೋಣಿಸಿದ ಸರವು
ಪ್ರೀತಿಯಿಂದ ಸರವ ತೊಡಿಸಿ
ನಿನಗಾಗಾಗುವೆ ಎಂದೆಂದೂ ನೆರವು!!

