ಪ್ರೇಮರಾಗ
ಪ್ರೇಮರಾಗ
ಜಾರುವ ಕಂಬನಿಯ ಬಿಂದು
ನೆಲ ಸೇರುವ ಮುನ್ನವೇ
ಉಸಿರು ನಿಲ್ಲುವಂತಹ ಅಪ್ಪುಗೆ
ವರುಷಗಳ ನೋವು ಇಂದಿಗೆ ಮುಕ್ತಾಯಗೊಂಡಿತು
ಕಣ್ಣುಗಳಲ್ಲಿ ಒಪ್ಪಿಗೆಯ ಸೂಚನೆ ಸಿಕ್ಕಾಗ
ನವಿರಾದ ಪ್ರೇಮ ಸಂಭಾಷಣೆ ಆರಂಭ
ತೋಳುಗಳಲ್ಲಿ ಬಂಧಿ ಅವಳು
ಹಣೆಯ ಮೇಲೊಂದು ಭದ್ರತೆಯ ಮುತ್ತು
ಸಂಜೆಯ ರಾಗಕೆ ಪ್ರೇಮಿಗಳ ಮೌನ ಸಂಭಾಷಣೆ

