STORYMIRROR

Pavan Kumar

Tragedy

2  

Pavan Kumar

Tragedy

ಪ್ರೇಮ ಸಂಸ್ಕಾರ!

ಪ್ರೇಮ ಸಂಸ್ಕಾರ!

1 min
168

ಪಡುವಣದಿ ತಮ ಕವಿಯಿತು

ಹಕ್ಕಿ ಹಾಡ ನಿಲ್ಲಿಸಿತು

ನರಿಗಳ ಘೀಳು ಮೊದಲಾಯಿತು

ಕೋಟಿ ಕನಸುಗಳ ಶವ ಹೊತ್ತ ಮನಸು

ಮಸಣದ ದಾರಿಯಿಡಿಯಿತು

ಕಂಗಳು ತುಂಬಿ ಗಂಟಲು ಬಿಗಿಯಿತು

ಬಡಪಾಯಿ ಹೃದಯಕ್ಕೆ ಹೊರೆಯಾಯಿತು

ಅಂಗೈ ಅಗಲದ ಗುಣಿ

ಅದರೊಳಗೆ ಕಳೇಬರಹವ ಊಣಿ

ಹಿಡಿದಾಯಿತು ವಲ್ಲದ ಓಣಿ

ಹೆಜ್ಜೆಗಳು ಭಾರ ಸಾಗುವ ದಾರಿ ದೂರ

ಸಿಗಬಾರದೆ? ಕಡಲ ತೀರ 

ಕಟ್ಟ ಬಯಸುವೆ ಅಲ್ಲೊಂದು ಸೂರ!


Rate this content
Log in

Similar kannada poem from Tragedy