ಕುರುಡು ಕರೋನಾ!
ಕುರುಡು ಕರೋನಾ!
ಕುರುಡು ಕರೋನಾ!
ಕುರುಡು ಕರೋನ ಕುಣಿಯುತಲಿತ್ತು
ಕಾಲಿಗೆ ಸಿಕ್ಕವರ ತುಳಿಯುತಲಿತ್ತು
ಕುರುಡು ಕರೋನ ಕುಣಿಯುತಲಿತ್ತು
ಉಳ್ಳವರ ಜೊತೆಯಲ್ಲಿ ಎಡಗಾಲನಿಟ್ಟು
ಬಡವರ ಬದುಕಿಗೆ ಬೆಂಕಿಯನಿಟ್ಟು
ಕುರುಡು ಕರೋನ ಕುಣಿಯುತಲಿತ್ತು
ತಾ ಮಾಡದ ತಪ್ಪಿಗೆ ಜೀವವ ತೆತ್ತು
ನೂರಾರು ಜೀವವು ಸಾಯುತಲಿತ್ತು
ಕುರುಡು ಕರೋನ ಕುಣಿಯುತಲಿತ್ತು
ದೇಶಕ್ಕೆ ದೇಶವೆ ಹೆಣಗಳ ರಾಶಿ
ಕಾಯುವ ದೇವನೆ ಮೂಕ ಸಾಕ್ಷಿ
ಕುರುಡು ಕರೋನ ಕುಣಿಯುತಲಿತ್ತು
ತಿರುಗುವ ಭೂಮಿಯ ಚಲನೆಗೇ ಕುತ್ತು
ಬಾಗಿಲ ಬಳಿಯಲ್ಲೇ ಕುಂತಿದೆ ವಿಪತ್ತು
ಕುರುಡು ಕರೋನ ಕುಣಿಯುತಲಿತ್ತು
ಮದ್ದಿಲ್ಲ ಮಸಿಯಿಲ್ಲ ಇದರದ್ದು ವಿಕೃತ ರೂಪ
ಸಿಕ್ಕವನ ಬಾಳಂತು ನರಕದ ಕೂಪ
ಕುರುಡು ಕರೋನ ಕುಣಿಯುತಲಿತ್ತು
ಮೈಮರೆತರೆ ತಪ್ಪಲ್ಲ ಈ ಹೆಮ್ಮಾರಿಯ ಕಾಟ
ಮರೆಯದೆ ನೀ ಪಾಲಿಸು ಸ್ವಚ್ಚತೆಯ ಪರಿಪಾಠ
ಕರುಡು ಕರೋನ ಕುಣಿಯುತಲಿತ್ತು