ಒಂದು ತುಂಡು ಆಕಾಶ
ಒಂದು ತುಂಡು ಆಕಾಶ
ಸೂರ್ಯ ಕಂತುವ ಸಮಯ ಕಿಟಕಿಯ ಬಾಗಿಲು ತುಸುವೇ ತೆರೆದು ಇಣುಕಿ ನೋಡಿದರೆ ಕಂಡಿದ್ದು ಒಂದು ಚೂರು ಆಕಾಶ ಬಾನೆಲ್ಲ ರಂಗು ರಂಗಿನ ಮೇಲೋಗರ ಅಲ್ಲಲ್ಲಿ ತುಸುವೇ ಚಲಿಸಿ ಮರೆಯಾಗುವ ತಿಳಿ ಮೋಡ ಅಸಂಖ್ಯ ನಕ್ಷತ್ರಗಳನ್ನು ತನ್ನೊಡಲಲಿಬಚ್ಚಿಟ್ಟಿಕೊಂಡಿರುವ ಮಾಯಾಜಾಲ !ಒಮ್ಮೆ ಮೋಡ , ಮತ್ತೊಮ್ಮೆ ಮೋಡ ಮುಸುಕಿದ ಚಂದಿರ ಇನ್ನೊಮ್ಮೆ ಸುಡುವ ಸೂರ್ಯ ಮತ್ತೊಮ್ಮೆ ಇಳಿ ಬಿಸಿಲು ಕಿಟಕಿಯ ಬಾಗಿಲು ಸಂಧಿಯಿಂದ ತೂರಿ ಬರುವ ಬೆಳದಿಂಗಳು ಅಮಾವಾಸೆ ಆವರಿಸಿದಾಗ ಬಾನಲ್ಲಿ ಮಿಂಚುವ ಅಸಂಖ್ಯ ತಾರೆಗಳು ಆಗಾಗ ಎಲ್ಲೋ ಪಯಣಿಸುವ ಹಕ್ಕಿಗಳ ಸಾಲು , ಇನ್ನೊಮ್ಮೆ ಸುರಿವ ಮಳೆ ಮಂಜು ಮುಸುಕಿದೆ ಆಗಸದ ಅಂಗಳದಲ್ಲಿ ಏನೂ ಕಾಣದೆ , ಪಟಪಟ ಹನಿವ ಮಳೆಯ ಸಪ್ಪಳ , ಏಕತಾನತೆ ಬೇಸರ ಭರಿಸುತ್ತದೆನಿಂತು ನಿಂತು ಸೋತು ಬಾಗಿಲು ತೆರೆದು ಆಗಸ ನೋಡಿ ಕಣ್ಣು ಬಾಡಿದಾಗಲೆಲ್ಲ ಆ ಬಿಂಬವನ್ನೇ ನನ್ನೆದೆಯೊಳಗಿರಿಸಿಕೊಂಡೇ ಅಡ್ಡಾಗುತ್ತ ಕನಸಿನಲಿ ತೇಲುತ್ತ ಆಗಸದ ತುಂಬಾ ಅಡ್ಡಾಡುತ್ತಿರುವೆ ಏನು ಮಾಡಲಿ ಹೇಳಿ ನಾನು? ನಾಲ್ಕು ಗೋಡೆಗಳ ನಡುವೆ ಒಂದೇ ಕಿಟಕಿಯ ಏಕಾಂತವಾಸದ ಜೈಲು ಕೊಠಡಿಯ ಒಂಟೀ ಜೀವಿ !
