STORYMIRROR

Pushpa Prasad

Abstract Romance Classics

4  

Pushpa Prasad

Abstract Romance Classics

ನಶೆ

ನಶೆ

1 min
16

ಜಾರಿ ಬಿದ್ದೆ ನಾನು ನೋಡುತ್ತಾ ನಿನ್ನೇ 

ಮರಳಿ ಎದ್ದಿರುವೆ ನಿನ್ನ ಬಾಹು ಹಿಡಿಯುತಾ

ಮನಸೂರೆಗೊಂಡೆ ನಿನ್ನ ಮೋಹಕ ಕಣ್ಣಲಿ

ಮದವೇರಿ ಬಿದ್ದೆ ನಾನದರ ನಶೆಯಲಿ!!


ಅಪ್ಪಿಕೊಂಡೆ ಪ್ರೀತಿಯಿಂದಲಿ ನೀ ನನ್ನ 

ನಿನ್ನವಳಾದೆ ನಾ ಆ ಕ್ಷಣದಿಂದಲೇ 

ನಾಚಿ ಮುದುಡಿದೆ ನಿನ್ನ ತೋಳತೆಕ್ಕೆಯಲಿ

ಪ್ರೀತಿ ಪುಟಿಯಿತು ನಿನ್ನ ಎದೆಯಾಳದಲಿ!!


ಉಸಿರು ಬೆರೆತಿರುವ ಆ ಕ್ಷಣ

ಮನಸೆರಡು ಸೇರಿದ ಆ ದಿನ

ಮರೆಯಲಾರೆನು ನಾನು ಎಂದಿಗೂ 

ಇರಲಿ ನಮ್ಮೀ ಬಂಧ ಎಂದೆಂದಿಗೂ!!


Rate this content
Log in

Similar kannada poem from Abstract