STORYMIRROR

Revati Patil

Classics Inspirational Others

3  

Revati Patil

Classics Inspirational Others

ನನ್ನ ಅಕ್ಷರಗಳಿವು,  ನಾನಲ್ಲ

ನನ್ನ ಅಕ್ಷರಗಳಿವು,  ನಾನಲ್ಲ

1 min
259

ಇವು ಇವತ್ತಿನವಲ್ಲ 

ಎಂದೋ ಮನದಿ ಮೂಡಿದ ಭಾವಗಳು 

ಇಂದು ಅಕ್ಷರವಾಗಿ ಅರಳಿವೆ. 


ನನ್ನ ಅಕ್ಷರಗಳಿಂದ ನನ್ನನ್ನು 

ಅಳೆಯುವ ಗೋಜಿಗೆ ಕೈಹಾಕದಿರು 

ಇವತ್ತಿನ ಈ ಭಾವ ಮುಂದೆಂದೊ ಅಕ್ಷರವಾಗಬಹುದು,  

ಆಗದೆಯೂ ಹೋಗಬಹುದು. 


ಆ ಅಕ್ಷರಗಳಲ್ಲಿ ನೀನೂ ಇರಬಹುದು 

ಇಲ್ಲದೆಯೂ ಇರಬಹುದು. 

ಒಳ್ಳೆಯವನೇ ಆಗಬಹುದು 

ಆಗದೆಯೂ ಇರಬಹುದು 


ನಾನು ಸಹ ಅಳೆಯಬಲ್ಲೆ ನಿನ್ನ 

ನಿನ್ನ ಹಿಂದಿನ ಕತೆಗಳಿಂದ. 

ನನ್ನ ಅಕ್ಷರಗಳಿವು, ನಾನಲ್ಲ


Rate this content
Log in

Similar kannada poem from Classics