STORYMIRROR

Ramamurthy Somanahalli

Classics Inspirational

2  

Ramamurthy Somanahalli

Classics Inspirational

ನನದೇನಿದೆ ...???

ನನದೇನಿದೆ ...???

1 min
114

ನನದೇನಿದೆ ನೀ ಹೇಳಮ್ಮ

ನೀನಿತ್ತ ಭಿಕ್ಷೆಯು ನಾನಮ್ಮ            || ನನದೇನಿದೆ ||


ಜೀವವ ತುಂಬಿ ಧರೆಗಿತ್ತೆಯಮ್ಮ

ಹಾಲನು ಕುಡಿಸಿ ಬೆಳೆಸಿದೆಯಮ್ಮ

ತೂಗುತ ತೊಟ್ಟಿಲ ಪಾಡುತ ಲಾಲಿಯ

ಪ್ರೀತಿಸಿ ಅಪ್ಪುತ ಬೆಳೆಸಿದೆ ನೀನು         ‌‌   ‌‌‌  ||ನನದೇನಿದೆ||


ಜನನಿ ತಾನೇ ಮೊದಲ ಗುರುವು

ಕಲಿಸಿದೆ ನೀನು ನುಡಿಯಕ್ಕರವ,

ನಾನು ನನದೆಂಬ ಭ್ರಮೆಯನಳಿಸುತ

ಬದುಕಿನ ಹಾದಿಯ ತೋರಿದೆಯಮ್ಮ         || ನನದೇನಿದೆ ||


ಕತ್ತಲು ಬೆಳಕಿನ ಜೀವನದಾಟ

ಮುಳ್ಳಿನ ಹಾದಿಯ ಸಾವಿರ ಪಾಠ

ಕಲಿಸಿದೆ ಸಾಗಲು ಅಂಜದೆ ದೂರ

ಹರುಷದಿ ಎಳೆಯಲು ಬದುಕಿನ ತೇರಾ        ||ನನದೇನಿದೆ||


Rate this content
Log in

Similar kannada poem from Classics