STORYMIRROR

Pushpa Prasad

Romance Classics Others

4  

Pushpa Prasad

Romance Classics Others

ನಲ್ಲ

ನಲ್ಲ

1 min
10

ಸಾಗರದ ಅಲೆಯಲ್ಲಿ ನಿನ್ನ ನೋಡಿದ ನೆನಪು

ಸಂಜೆಯ ಸಮಯ ಸೂರ್ಯ ಮುಳುಗುವಲ್ಲೇ 

ಬಂದನಾ ಚಂದಿರ ಬೆಳದಿಂಗಳ ಬೆಳಕಲ್ಲಿ 

ನನಗೇನೋ ಆಗಿದೆ ಬಾರೋ ಸನಿಹ ನನ್ನ ನಲ್ಲ!!


ಹಕ್ಕಿಗಳು ಗೂಡು ಸೇರುವ ಹೊತ್ತಿನೊಳು

ಉಳಿದ ಪ್ರಣಯದ ಕಥೆಯ ಹೇಳಿದಂತೆ

ಪಕ್ಕದಲೆ ಸೂಸುತಿದ್ದ ಮಲ್ಲಿಗೆಯ ಪರಿಮಳ 

ಬೇಕೆನಿಸಿಹುದು ಎನಗೀಗ ನಲ್ಲ!!


ಮಲ್ಲಿಗೆಯೋ ಸಂಪಿಗೆಯೋ ಮತ್ತೆ ಶೃಂಗಾರವೋ 

ಎಲ್ಲ ಮಾಯವಾಗಿದೆ ಗೆಳೆಯ ನಿನ್ನ ನಗುವಿನಲ್ಲೆ

ಸುರಿದಿದೆ ಹೃದಯಕ್ಕೆ ನಿನ್ನ ಪ್ರೇಮದ ಮಳೆಯು 

ಬಾರೋ ನೀ ಮೆಲ್ಲ...ನನ್ನನು ನೋಡೋ ನಲ್ಲ!!


Rate this content
Log in

Similar kannada poem from Romance