ನಿಯತ್ತಿನ ಪ್ರಾಣಿ
ನಿಯತ್ತಿನ ಪ್ರಾಣಿ
ಮನೆಮಂದಿ ಕಂಡರೆ ಸಾಕು
ಬಾಲ ತಲೆಯನ್ನು ಅಲ್ಲಾಡಿಸಲೆ ಬೇಕು
ಹಗಲು-ರಾತ್ರಿ ನಿನ್ನಯ ಕಾವಲು
ಕಾಯುವೆ ಈ ಮನೆಯ ದಿನಾಲು
ಕಾಯಕ ಮರೆಯದ ನಿಯತ್ತಿನ ಜೀವ
ಸುಂದರ ಸುಮಧುರ ಮನದ ಭಾವ
ಎತ್ತರ ಎತ್ತರ ಹಾರುವೆ ಓಡುವೆ
ಹತ್ತಿರ ಹತ್ತಿರ ಬರುವೆ ಹಾಗೆ ಜಾರುವೆ
ನೆನಪು ನಿನಗೆ ತುಸು ಜಾಸ್ತಿ
ನಿನ್ನ ಓಡಾಟ ನೋಡಲು ಏನೋ ಮಸ್ತಿ
ನನ್ನ ಪ್ರೀತಿಯ ಗುಟ್ಟು ನೀನು
ಮರುಜನ್ಮದಲ್ಲಿ ಕಾಯುವೆ ನಾನು
