STORYMIRROR

ಶಿವಲೀಲಾ ಹುಣಸಗಿ

Inspirational

3  

ಶಿವಲೀಲಾ ಹುಣಸಗಿ

Inspirational

ನಿರೀಕ್ಷೆ

ನಿರೀಕ್ಷೆ

1 min
251

ಮಣ್ಣ ಸೀಳುತ

ಇಳಿಬಿಟ್ಟ ಬೇರು

ಕೊಂಚವು ಹರಿಬಿಡದೆ

ಬಸವಳಿಯದೆ ಸಾಗಿತ್ತು

ಬೋರವೆಲ್ ಕೊರೆದಷ್ಟು

ಎದೆಯ ಸೀಳಿದಷ್ಟು

ಇಂಚಿಂಚು ಕ್ಷೀಣಿಸದೇ

ಹುದುಗಿತ್ತು ನಿನ್ನರಸುತ್ತ

ಆಳ ಅಂತರಾದಿ...

ಆಗಾಗ ಪಕಳೆಗಳು

ಮೊಗ್ಗಾಗಿ ಅರಳುವ ಗಳಿಗೆ

ಕೂಡಿಗೊಂದು ಆಸರಾಗುವ

ತವಕದಲಿ ಮನದಿ ಹಿಗ್ಗುತ

ಮರವ ತಬ್ಬಿದ ಬಳ್ಳಿಗದುವೆ

ಜಗದ ಪ್ರೇಮವ ಅಪ್ಪಿದಂತಿತ್ತು

ಹರಿದು ಹಂಚುವ ಕೈಗಳಿಗೆ

ಬಿನ್ನಾಣದ ಬಿರುಕುಗಳು

ಮರೆಮಾಚಿದಂತೆ ಕಾಣುತ್ತಿತ್ತು

ಜೀವವೆಲ್ಲಿ ನಶಿಸುವುದೆಂಬ ಆತಂಕ

ಮಡುಗಟ್ಟುತ್ತಿದ್ದಂತೆಯೇ...

ಮಣ್ಣಲಿ ಬೆಸೆದು ಹೋದ

ಕನವರಿಕೆಗಳ ಸಮಾದಿಯು

ಮುಂದೊಂದುದಿನ ಸ್ಮಾರಕ

ಹಸಿಯುಸಿರುಗಳ ಮೆಲುಕು

ಪ್ರೇಮಕ್ಕೊಂದು ನವಭಾಷ್ಯೆ

ಮನಸಿನ ಕಕ್ಕುಲತೆಗಳು

ಬಿಚ್ಚಿಟ್ಟು ಹರವಿದಂತೆಲ್ಲ

ಧರೆಯತುಂಬ ತರುಲತೆಗಳು

ನೀನು ನಾನಾಗಿರದೇ

ನನ್ನಲವಿತ ಪ್ರತಿರೂಪವಾಗಿ

ನೂರು ಕಂಗಳ ಹೊಳಪಾಗಿ

ನಾನು ನೀನಾಗುವ ಕ್ಷಣಕೆ

ಬಾನಂಗಳ ಕಾದು ಕುಂತಿದೆ

ತಾರೆಗಳು ಮಂಕಾಗಿ ದಿಟ್ಟಿಸಿವೆ

ನಿನ್ನಾಗಮನವ ಬಯಸುತ..

ಜೀವಕೋಟಿಯ ಉಸಿರು

ಅದು ಹೆಣ್ಣುಅಲ್ಲ,ಗಂಡು ಅಲ್ಲ

ಬ್ರಹ್ಮಾಂಡದ ಜೇನುಗೂಡು

ನಶ್ವರದ ಬದುಕಿಗೆ ಕನ್ನಡಿ.

ನಾನು ನನದೆಂಬ ಮುನ್ನುಡಿಯ

ಸತ್ತವನ ಭಾವ ಪಟದ ಮೌನದಂತೆ.



Rate this content
Log in

Similar kannada poem from Inspirational