ನೀನಿರಲು ಜೊತೆಯಲ್ಲಿ
ನೀನಿರಲು ಜೊತೆಯಲ್ಲಿ
ಅಮ್ಮಾ ನೀನಿರಲು ಜೊತೆಯಲ್ಲಿ
ಬೇರೇನು ಬೇಕು ಈ ಜಗದಲ್ಲಿ
ನಗುವ ಕಲಿಸಿದೆ ನೀನು
ದುಃಖವ ಮರೆಸಿದೆ ನೀನು
ಕೈ ತುತ್ತು ಕೊಟ್ಟೆ ನೀನು
ಕೈಯಿಡಿದು ನಡೆಸಿದೆ ನೀನು
ಕಾಲು ಜಾರಿ ಬಿದ್ದಾಗ ಎತ್ತಿದೆ
ಕುಗ್ಗಿದಾಗ ಧೈರ್ಯ ತುಂಬಿದೆ.
ನನಗೆ ಉಷಾರಿಲ್ಲದಾಗ
ನೀನು ನಿದ್ದೆ ಗೆಟ್ಟಿದ್ದೆ
ನಾನು ಉಷಾರಾದಾಗ
ನೀನು ನಲಿದಾಡಿದ್ದೆ
ಏಳೇಳು ಜನ್ಮದಲ್ಲೂ ಅಮ್ಮಾ
ನೀ ಆಗಬೇಕು ನನ್ನ ತಾಯಿ
ನಿನೋಬ್ಬಳಿದ್ದರೆ ಈ ಜಗದಲ್ಲಿ
ನಾನೇ ರಾಣಿ, ನಾನೇ ಮಹಾರಾಣಿ.