ನಗು
ನಗು
ನಗುವು ನಮ್ಮೊಳಗೆ ಹೊಳೆಯೋ ಮಾಣಿಕ್ಯದಂತೆ
ನಗುವು ಮತ್ತೊಬ್ಬರ ಆಕರ್ಷಿಸುವ ಕನ್ನಡಿಯಂತೆ
ನಗುವು ನೋವ ಮರೆಸುವ ಸಾಧಕನಂತೆ
ನಗುವು ಮನವ ತಣಿಸೋ ಸ್ನೇಹಿತನಂತೆ
ನಗುವು ಜೀವನವ ಉಲ್ಲಾಸ ಗೊಳಿಸೋ ಬಂಧುವಿನಂತೆ
ನಗುವು ಇನ್ನೊಬ್ಬರ ನಗಿಸೋ ಮುತ್ತಿನಂತೆ
ನಗುವೇ ಜೀವನ ನಗುವೇ ಪಾವನ
ನಗುವೇ ಸಿಂಚನ
ನಗುವೇ ಮಂಥನ
ನಗುವೇ ಸಾಧನ
ನಗುವಿಲ್ಲದ ಮೊಗವು ಬಂಜರು ಭೂಮಿಗೆ ಸಮಾನ.
ಆದರೂ ನಗು ಮನುಜ ಬದುಕಲ್ಲಿ ನೋವು ಸಹಜ
ಒಮ್ಮೆ ನಕ್ಕು ನೋಡು ಅಗ್ರಜ ಆವಾಗ ಮನಸೇ ಹಗುರ ಅನುಜ
