STORYMIRROR

Divya B c

Tragedy

2  

Divya B c

Tragedy

ನೆನಪಿನ ಬೆಳಕು

ನೆನಪಿನ ಬೆಳಕು

1 min
3.0K

ಬಾಳ ದಾರಿಯಲಿ ನೀ ಏಕೆ ಮರೆಯಾಗಿ ಹೋದೆ..

ಸವಿನೆನಪಿನ ಸರಮಾಲೆಯನ್ನು ಬಿಟ್ಟು ,ಅದೃಶ್ಯವಾಗಿ ಮುಂದೆ ನಡೆದೆ..


ಹಿಂದಿಹುದು ಕಳೆದ ಕ್ಷಣಗಳು..

ಮುಂದಿಹುದು ತಿಳಿಯದ ಪಯಣಗಳು 

ಈಗಿರುವುದು ಕನಸುಗಳು​ ಹಾಗು ಓಡುವ ಸಮಯ ಮಾತ್ರ..


ಕೂಗಿ ಕರೆಯಿತು ಸಮಯ,

ಮುಗಿದು ಹೋಯಿತು ಕಾಲ,

ಬಾಡಿ ಹೋಯಿತು ಹೂವು..

ಮತ್ತೆ ಚಿಗುರಿತು ಕಾಲ,

ಕೈ ಬೀಸಿ ಕರೆಯಿತು ಸಮಯ,

ಅರಳಿತು ಹೂವು.. 


ಇವೆ ಬದುಕಿನ ಹಗಲು ರಾತ್ರಿಗಳು

ಆರಂಭವು ಕೊನೆಗೊಂಡು ಮರೆಯಾಗಿ ಹೋದರು,

ಕೊನೆ ಹೇಳಿತು ಹೀಗೆ..

ನಾ ಮರೆಯಾಗಿ ನಿಂತಿರುವೆ ನೆರಳಾಗಿ ಎಂದೆಂದೂ..

ಹೊಸ ಆರಂಭದಿ ನೀ ನನ್ನೊಂದಿಗೆ ಸಾಗುತಿರು ಮುಂದೆ!!



Rate this content
Log in

Similar kannada poem from Tragedy