" ನೆನಪುಗಳ ಹಾದಿಯಲ್ಲಿ "
" ನೆನಪುಗಳ ಹಾದಿಯಲ್ಲಿ "


ಕಾಣದ ತೀರಕೆ ಸಾಗಿದೆ ಪಯಣ..
ಕಡಲ ತೀರದ ಈ ಯಾನ.
ಎತ್ತ ಸಾಗುತಲಿಹುದೋ ಅರಿಯೆ ನಾನು..
ಎಂದು ಮುಗಿವುದೋ ತಿಳಿಯದಿನ್ನು.
ಸುಡು ಬಿಸಿಲು ತಂಗಾಳಿಯಲಿ ತೇಲಿದೆ ಮನ..
ಬಾನಂಚಿನ ಅಂಗಳದಿ ತುಂಬಿದೆ ಮೌನ.
ಹಗಲು ರಾತ್ರಿಗಳ ಈ ಯಾನದಲಿ,
ನಸುನಗುತಾ ಸಾಗುತಿರಲಿ ಈ ಮುಗಿಯದ ಪಯಣ !!