ಅಂತರಾಳದ ಸವಿಗನಸು
ಅಂತರಾಳದ ಸವಿಗನಸು

1 min

3.1K
ಕನಸಿನ ಮೂಟೆಯಲಿ ,
ಬಂದು ಮರೆಯಾಗುವ ಕಥೆಗಳೆಷ್ಟೋ..
ದೂರದ ಕಡಲನು ಕಂಡು ,
ನಲಿಯುವ ಮನಸೆಷ್ಟೋ..
ಬೆಂಬಿಡದ ಕೆಲಸ ನೆರಳಂತೆ,
ಕಳೆದು ಹೋಗುವ ಸಮಯ ಮಾಯೆಯಂತೆ.
ಓ ಬದುಕೇ..
ಆಕಾಶಕ್ಕೊಂದು ಏಣಿ ಇದ್ದರೆ,
ಒಮ್ಮೆ ಹೋಗಿ ಬರಬಹುದಿತ್ತೇ..
ತೇಲುವ ಮೋಡಗಳ ನೋಡಲು .
ಬೆಟ್ಟ ಗುಡ್ಡಗಳ ನಡುವೆ ಮನೆ ಇದ್ದರೆ,
ಕೆಲ ಹೊತ್ತು ವಿಶ್ರಮಿಸಲು .
ಸಾಗರದಾಚೆ ಒಂದು ಗೂಡು ಇದ್ದರೆ,
ಅಲೆಗಳ ತಂಪಾದ ಸದ್ದಿಗೆ ಕಳೆದುಹೋಗಲು .
ಜೀವನದ ಯಾತ್ರೆಯೊಳು , ಕನಸಿನ ಬುತ್ತಿ
ಸಾಗುತಲಿರುವುದು. ಅದೆಲ್ಲಿ ಸೇರಿ ಮುಟ್ಟುವುದೋ , ಅರಿಯಲಾರೆವು ನಾವು !