STORYMIRROR

Divya B c

Abstract Classics Others

2  

Divya B c

Abstract Classics Others

ಮನದ ಮಾತುಗಳು

ಮನದ ಮಾತುಗಳು

1 min
103

ಕಾಣದ ಲೋಕದಲ್ಲಿ,

ಸಾಗದ ದಾರಿಯಲ್ಲಿ,

ಮರೆಯಲಾಗದ ನೆನಪಲ್ಲಿ,

ತೆರೆಯದ ಪುಟಗಳಲ್ಲಿ,

ಆಡದ ಸವಿಮಾತಿನಲಿ...

ಕೇಳದ ಧ್ವನಿಯಲ್ಲಿ..,

ಏನೋ ಅಳಿಸಲಾಗದ ನೋವಿಹುದು..

ಅದರಲ್ಲೇನೊ ಸವಿಗನಸಿಹುದು...


ಮನಸಿನ ಪುಟಗಳ ,

ನಡುವಿನ ಸಾಲುಗಳ,

ಅಗಲ ಹುಡುಕುತಲಿ..

ಸಮಯದ ಹೆಗಲೇರಿ ಹೊರಟೆ..

ಎತ್ತ ನೋಡಿದರೂ ಮಾಯೆ

ಕಾಣದ ಪ್ರತಿಬಿಂಬದ ಛಾಯೆ..


ತಿರುವು ಕಾಣದ ದಾರಿಯಿದು,

ಕತ್ತಲಿಲ್ಲದ ಪಯಣವಿದು..

ಹೊಂಬಿಸಿಲು ಬೀಳುತಲೀ,

ಮನದ ಮರೆತ ಕೋಣೆಯಲಿ..


ಉಳಿದ ನೆನಪುಗಳೇ ನಮ್ಮ ಬಾನಂಗಳದ...

ಹೆದ್ದಾರಿಯಲ್ಲಿರುವ ಹಚ್ಚ ಹಸಿರು ಹುಲ್ಲಿನಂತೆ,

ಅಂತರಾಳದ ಮಾತುಗಳು ಭೋರ್ಗರೆಯುವ

ಅಲೆಗಳಂತೆ,

ಮನದ ಪ್ರಶಾಂತ ಕಡಲಿನಲ್ಲಿ..

ಬಂದು ಮರೆಯಾಗಿ ಹೋಗುವವು...

ಮುಂದೇನಿಹುದೊ ತಿಳಿಯೆನು ಈ ದಾರಿ.,

ಹೋಗಿ ಬರೋಣ ಹೀಗೆ ಬಾರಿ ಬಾರಿ..,

ಸ್ವಚ್ಚಂದದ ಸುಮಧುರ ಪಯಣವನ್ನೇರಿ. !!



Rate this content
Log in

Similar kannada poem from Abstract