ಮಿಂಚಿನ ವೇಗ⚡☄
ಮಿಂಚಿನ ವೇಗ⚡☄

1 min

3.0K
ಬದುಕಲ್ಲಿ ಕತ್ತಲು ಆವರಿಸಿತ್ತು...
ಕೋಣೆಗಳು ಸದ್ದಿಲ್ಲದೆ ಮಲಗಿತ್ತು..!
ನಿಶ್ಯಬ್ದದ ಕೂಗು ಎಲ್ಲೆಡೆ ಹರಡಿದಾಗ..,
ಜೋರಾದ ಶಬ್ದವೊಂದು ಬಾಗಿಲ ತೋರಣದಿ ಕಂಡು.,
ಎಲ್ಲಿರುವೆ ಎದ್ದೇಳು ಎಂದು ಕರೆಯುತಿತ್ತು...!
ಹುಡುಕುತ್ತ ಕಿಟಕಿಗಳ ಬಳಿ ಬೀಸುವ ತಂಗಾಳಿಗೆ ನಿಂತೆ..
ಆಕಾಶದಲ್ಲಿ ಉದ್ಭವಿಸಿ, ಭೂಮಿಯನು ತಲುಪುವ ಪೃಕೃತಿಯ ವಿಸ್ಮಯಗಳನ್ನು ಕಂಡು, ಮೂಕವಿಸ್ಮಿತಳಾದೆ.,
ಇವೇ ಸಾರಿ ಹೇಳುತ್ತಿತ್ತು ನೀ ಸಾಗುತಿರು ಮುಂದೆ !!