STORYMIRROR

Prabhakar Tamragouri

Abstract

2  

Prabhakar Tamragouri

Abstract

ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ....?

ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ....?

1 min
106

ಅದೆಷ್ಟೋ ವಸಂತಗಳು

ಬಂದು ಹೋದವು

ಅದೇ ಅರುಣ ಕಿರಣಗಳ ಉದಯ

ನೆತ್ತಿಯ ಮೇಲೆ ನಿಂತ ಸೂರ್ಯ

ನಸುಗೆಂಪಿನ ಮುಸ್ಸಂಜೆ

ಸೂರ್ಯಾಸ್ತದಲಿ ಬೆಳಕಿನ ರಾತ್ರಿ


ನಿನ್ನೆಯ ಕಹಿನೆನಪುಗಳು

ಇಂದಿನ ಸುಂದರ ಕನಸು

ಇಂದಿನ ಭಗ್ನ ಜೀವನ

ಭವಿಷ್ಯದ ಕತ್ತಲ ದಾರಿ


ಉರುಳಿ ಹೋದ ವಸಂತಗಳು

ಹುದುಗಿ ಹೋದ ವರ್ತಮಾನಗಳು

ಚಿಂತೆಗಳಿಸುವ ನಾಳೆಗಳು

ಮೌನದಲ್ಲೇ ಮುಗಿದು ಹೋದ ಈ ದಿನಗಳು

 

ಎಳೆ ಎಳೆಯಾಗಿ ನುಸುಳಿ

ಬರುವ ದಿನಗಳೆಲ್ಲಿ.?

ಪಕಳೆಗಳಂತೆ ಉದುರುವ ನೆನಪುಗಳೆಲ್ಲಿ?

ಎಡಬಿಡದೆ ಕಾಡುವ

ಈ ಸಂಸಾರದಲ್ಲಿ

ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ?


Rate this content
Log in

Similar kannada poem from Abstract