ನಾನೊಂದು ಹಕ್ಕಿಯಾಗಿದ್ದರೆ...!
ನಾನೊಂದು ಹಕ್ಕಿಯಾಗಿದ್ದರೆ...!


ಹಂಗಿರದೆ ಹಾರುತ್ತಿದ್ದೆ ದಿಗಂತದಲಿ
ದೂರ ದೂರ ಸರಿಯುತ್ತಿದ್ದೆ ನಲಿಯುತಲಿ
ಮತ್ತೆಂದೂ ಬಾರದ ಈ ಸ್ವಾರ್ಥಿಗಳ ಲೋಕದಲಿ
!!ನಾನೊಂದು ಹಕ್ಕಿಯಾಗಿದ್ದರೆ!!
ನಿಲುಕದೆ ಕೈಗೆ ಹಾರುವೆ ಹಾಗೆ
ಮರುಳದೆ ನಿಮ್ಮ ಶೋಕಿಯ ಕರೆಗೆ
ಸಾಗುವೆ ರಂಗಿನ ಸೀಮಾರೇಖೆಗೆ
ಸಂಕೋಲೆಯ ಸರಿದು ಸಂತಸದೆಡೆಗೆ
ಹಾರುತ ಅರಸಿ ಪ್ರೀತಿಯ ಕಡೆಗೆ
!!ನಾನೊಂದು ಹಕ್ಕಿಯಾಗಿದ್ದರೆ!!
ಅಮ್ಮನ ತೋಳಲಿ ಬೆಚ್ಚನೆ ಇರುತ,
ಜಿಗಿಯುತ, ಕುಣಿಯುತ ಅಂಬರದಿ
ಅಂದಣವೇರಿ ಚೆಂದದ ಗೆಳೆಯರ ಕೂಡುತಲಿದ್ದೆ
ಆನಂದದಿ ತೇಲುತ, ಹಾಡುತ ಸೂರನು ಸೇರುತಲಿದ್ದೆ
!!ನಾನೊಂದು ಹಕ್ಕಿಯಾಗಿದ್ದರೆ!!
ಕಲಿಯುತ,ಏರುತ ಕಾರ್ಮೋಡದಿ ಕರಗುತ
ಕೂಗುತಲಿದ್ದೆ,
ಜೀವನ ಸ್ವಾತಂತ್ರ್ಯ ಸಾರುತಲಿದ್ದೆ,
ಅನುರಾಗ ಹಂಚುತ ಮೆರೆಯುತಲಿದ್ದೆ,
ಅನಂತದೆಡೆ ಸಾಗುತ ಅಸುನೀಗುತಲಿದ್ದೆ
!!ನಾನೊಂದು ಹಕ್ಕಿಯಾಗಿದ್ದರೆ!!