ನಾ ತುಸು ತರಲೆ
ನಾ ತುಸು ತರಲೆ
ಮುಂಗುರುಳ ನೇವರಿಸಿ ಸಲಿಗೆ ತರಿಸಿ
ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತು
ಸಿಹಿಗಲ್ಲ ಗಿಣಿಮೂಗ ತುಸು ಹಿಡಿದೊತ್ತಿ
ಹೊಳಪಿನ ತುಟಿಗಳಿಗೆ ನೀಡಲೇ ಸಿಹಿಮುತ್ತು!!
ಹೆಜ್ಜೆ ತಪ್ಪುತ್ತಿದೆ ಎದೆಯಂಗಳದಲಿ
ನೀ ನೋಡುವ ತುಂಟ ನೋಟಕ್ಕೆ
ಬರಸೆಳೆದು ನಿನ್ನ ನಡುವ ಬಳಸಿ
ಬಯಕೆಗಳ ಬಾಗಿಲ ತೆರೆದು ಬಿಡಲೆ?
ಹೊಕ್ಕಾಗ ಒಂದೊಳ್ಳೆ ಇರುವೆ ಎದೆಗೂಡಿನಲಿ
ಕನಸಲ್ಲೇ ಕಣ್ಮುಚ್ಚಿ ತುಟಿಕಚ್ಚಿ ನಗುವೆ
ನಾ ಮುದ್ದು ಮಾಡುವೆ ನಿನ್ನ ಮೋಹಿಸುತಲಿ
ಅದಕೆಂದು ಬೆರಳಿಂದ ಕಚಗುಳಿಯಿಡಲೆ?
ದೂರದಿಂದಲೇ ನಿನ್ನ ನೋಡಿ ನಾ ಕಾಡುವೆ
ಬಯಕೆಗಳ ಕದ ತಟ್ಟಿ ನಾ ಓಡುವೆ
ನೀ ತಣ್ಣಗಾಗುವವರೆಗೂ ದಣಿವಾಗದಿರುವೆ
ಮನ್ನಿಸೆ ಹುಡುಗಿ ನಾ ತುಸು ತರಲೆ!
✍️ ಪುಷ್ಪ ಪ್ರಸಾದ್ ಉಡುಪಿ