ಮುಸ್ಸಂಜೆ ಹಕ್ಕಿ ಕಲರವ
ಮುಸ್ಸಂಜೆ ಹಕ್ಕಿ ಕಲರವ
ಬಾನಂಗಳದಲ್ಲಿ ಬೆಳಗೋ ಸೂರ್ಯನಿಗೆ ವಿದಾಯ
ಆಗಸದಲ್ಲಿ ಮೂಡಿತು ಮುಸ್ಸಂಜೆ ಸಮಯ
ಹೊಳೆವ ನಕ್ಷತ್ರ ಬಾನಂಗಳದಲ್ಲಿ ಬೆಳಗಿದೆಯ
ಬೆಳಗು ಚಂದಿರ ಮನದಂಗಳದಲ್ಲಿ ಬಂದೆಯ
ಹಕ್ಕಿಗಳ ಕಲರವಕೆ ಮನವೇ ಜಾರಿ
ಕಣ್ಣುಗಳು ಅರಳಿತು ಹಲವು ಬಾರಿ
ಹೋಗಳಲಾಗದು ಸೌಂದರ್ಯ ಲಹರಿ
ಇದಕಂಡು ಆಯಿತು ಅಚ್ಚರಿ
ತಂಪಿರುವ ತಂಗಾಳಿಯ ಹಾಜರಿ
ಸ್ವರ್ಗ ಧರೆಯಲ್ಲಿದ್ದ ಮಾದರಿ
ನಿಸರ್ಗವೇ ಇದಕ್ಕೆ ಅಧಾರಿ ಪ್ರಕೃತಿ ನೀನೆ ಸುರಸುಂದರಿ
