ಮುದ್ದಿನ ತಾರೆ
ಮುದ್ದಿನ ತಾರೆ
ನಿನ್ನ ಹೆತ್ತೆ ತುತ್ತು ಕೊಟ್ಟೆ
ನನ್ನೆ ನಾನು ಮರೆತೆನು
ಚಿನ್ನದಂಥ ಗುಣದ ಮಗುವೆ
ಮನ್ನಿಸೆನ್ನ ತಪ್ಪನು
ವರವು ನೀನು ನಮ್ಮ ಮನೆಗೆ
ಹರನು ಕೊಟ್ಟ ಕಾಣಿಕೆ
ಸಿರಿಯ ಹಾಗೆ ಬಂದೆ ಬಳಿಗೆ
ನೆರಳು ನೀಡು ಜೀವಕೆ
ಮನದಿ ನೂರು ಬಯಕೆ ತಂದೆ
ಜನನಿ ಖುಷಿಯ ಬಯಸುತ
ಮನೆಯ ಜನರ ಮನಸು ಗೆದ್ದೆ
ಜನಿಸಿ ಮನವ ಬೆಳಗುತ
ಹೊಳೆವ ನಯನ ಚೆಲುವ ವದನ
ಸೆಳೆವೆ ಮಮತೆ ತೋರುತ
ಕಳೆವ ಸಮಯ ನಿನ್ನ ಜೊತೆಗೆ
ಕಳೆಯು ಬಂತು ನಲಿಯುತ
