ಮಣ್ಣು ಮತ್ತು ಮಳೆ
ಮಣ್ಣು ಮತ್ತು ಮಳೆ
ಕಾದ ಮಣ್ಣು ಕಾಯುತಿಹುದು
ಎಂದೋ ಬರುವ ಮಳೆಗಾಗಿ
ಪ್ರಿಯತಮೆ ತನ್ನ ಪ್ರಿಯಕರನ
ಕಾಯುವ ತೆರದಲಿ ಕಾತರದಿ
ಮಣ್ಣಿಗೂ ಮಳೆಗೂ ಇಹುದು
ಅವಿನಾಭಾವ ಸಂಬಂಧ
ವೈಶಾಖದ ರಣ ಬಿಸಿಲಿನಲ್ಲಿ
ಬೆಂದು ಹೋಗುವ ಮಣ್ಣು
ಜ್ಯೇಷ್ಠದ ಮುಂಗಾರು ಮಳೆಗೆ
ಕಾದು ಬಾಯಿ ತೆರೆದು ಕುಳಿತು
ಹಪಹಪಿಸುತಿಹುದು ಹನಿಗಾಗಿ
ಕಡೆಗೂ ಮೊದಲ ಮಳೆ
ಇಳೆಯ ಮೇಲೆ ಸಿಂಪಡಿಸೆ
ಮಣ್ಣಿನ ಕಾವು ಮೇಲೇರಿ
ಮಣ್ಣಿನ ಘಮ ಅರಳುವುದು
ಎಲ್ಲೆಲ್ಲೂ ಸಂತಸವ ತರುವುದು
ಮಣ್ಣಿದ್ದರೆ ಮಳೆಯ ಘಮ
ಮಣ್ಣೇ ಮಾಯವಾದರೆ
ಎಲ್ಲಿರುವುದು ಆ ಮೊದಲ
ಮಳೆಯ ಮಣ್ಣಿನ ಘಮ
ಮಣ್ಣಿಂದ ಕಾಯ ಮಣ್ಣಿಂದ
